HomeKarnatakaBREAKING : 2024-25 ನೇ ಸಾಲಿನ 'NMMS' ಪರೀಕ್ಷೆಯ ಕೀ ಉತ್ತರ ಪ್ರಕಟ, ಆಕ್ಷೇಪಣೆ ಆಹ್ವಾನ

BREAKING : 2024-25 ನೇ ಸಾಲಿನ ‘NMMS’ ಪರೀಕ್ಷೆಯ ಕೀ ಉತ್ತರ ಪ್ರಕಟ, ಆಕ್ಷೇಪಣೆ ಆಹ್ವಾನ

ಬೆಂಗಳೂರು : 2024-25ನೇ ಸಾಲಿನ NMMS ಪರೀಕ್ಷೆಯನ್ನು ದಿನಾಂಕ:02.02.2025 ಭಾನುವಾರದಂದು ಕೆ.ಎಸ್.ಇ.ಎ.ಬಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ನಡೆಸಲಾಗಿರುತ್ತದೆ. ಸದರಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದ ಕೀ ಉತ್ತರಗಳನ್ನು ದಿನಾಂಕ:06.02.2025 ರಂದು ಮಂಡಳಿಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.

ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಈ ಕಛೇರಿಯಿಂದ ನೀಡಲಾದ ನಿಗದಿತ ನಮೂನೆ (ಮಂಡಳಿಯ ವೆಬ್ ಸೈಟ್ನಲ್ಲಿ https://kseab.karnataka.gov.in/ ದೊರೆಯುತ್ತದೆ) ಯಲ್ಲಿ ದಿನಾಂಕ: 06.02.2025 ರಿಂದ 08.02.2025 ರ ಸಂಜೆ 5.30 ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

NMMS ಪರೀಕ್ಷೆಯ ಪ್ರಶ್ನೆಪತ್ರಿಕೆ-1 ಮತ್ತು 2ರ ಪ್ರತಿ ಪ್ರಶ್ನೆಗಳಿಗೆ ಪ್ರತ್ಯೇಕವಾಗಿ ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಇ-ಮೇಲ್ ಮೂಲಕ ([email protected]) ಅಥವಾ ಅಂಚೆ ಮೂಲಕ ಕಾರ್ಯನಿರ್ವಾಹಕ ನಿರ್ದೇಶಕರು, ಕೆ.ಎಸ್.ಕ್ಯು.ಎ.ಎ.ಸಿ, ಕೆ.ಎಸ್.ಇ.ಎ.ಬಿ, 1ನೇ ಮಹಡಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಈ ವಿಳಾಸಕ್ಕೆ ದಿನಾಂಕ:08.02.2025 ರ ಸಂಜೆ 5.30ರ ಒಳಗೆ ತಲುಪುವಂತೆ ಸಲ್ಲಿಸುವುದು. ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಬರುವಂತಹ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular