ಕರ್ನಾಟಕದ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಮತ್ತಷ್ಟು ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ ಸಕಾಲ ಯೋಜನೆಯಲ್ಲಿ ಹೊಸ ಸೌಲಭ್ಯಗಳನ್ನು ಪರಿಚಯಿಸಲಾಗಿದೆ. ರಾಜ್ಯ ಸರ್ಕಾರದ ವಿವಿಧ ಪರವಾನಗಿ ಮತ್ತು ಪ್ರಮಾಣಪತ್ರ ಸೇವೆಗಳನ್ನು ಸಕಾಲ ವ್ಯಾಪ್ತಿಯಲ್ಲಿ ಲಭ್ಯವಾಗುವಂತೆ ಮಾಡಲಾಗಿದ್ದು, ಅರ್ಜಿಗಳ ವಿಲೇವಾರಿ ಕಾಲಮಿತಿಯನ್ನು ಕಡಿತಗೊಳಿಸುವುದರ ಜೊತೆಗೆ ಯುಪಿಐ ಮೂಲಕ ಶುಲ್ಕ ಪಾವತಿ, ವಾಟ್ಸ್‌ಆ್ಯಪ್ ಹಾಗೂ ಎಸ್‌ಎಂಎಸ್ ಮೂಲಕ ಅರ್ಜಿ ಸ್ಥಿತಿ ಪರಿಶೀಲನೆ ಮತ್ತು ಡಿಜಿಲಾಕರ್‌ನಲ್ಲಿ ಪ್ರಮಾಣಪತ್ರಗಳ ಸುರಕ್ಷಿತ ಸಂಗ್ರಹದಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಸಕಾಲ ಸೇವೆಗೆ ಇನ್ಮುಂದೆ ಮತ್ತಷ್ಟು ವೇಗ ಮತ್ತು ಪಾರದರ್ಶಕ!
ರಾಜ್ಯ ಸರ್ಕಾರದ ಎಲ್ಲ ಪರವಾನಗಿ ಮತ್ತು ಪ್ರಮಾಣಪತ್ರ ಸೇವೆಗಳು ಈಗ ‘ಸಕಾಲ’ ಯೋಜನೆಯಲ್ಲಿ ಲಭ್ಯ. ಅರ್ಜಿಗಳ ಕಾಲಮಿತಿ ಕಡಿತಗೊಳಿಸಲಾಗಿದ್ದು, ಕೌಂಟರ್‌ನಲ್ಲೇ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಬಹುದು.
ಯುಪಿಐ ಮೂಲಕ ಸುಲಭವಾಗಿ ಶುಲ್ಕ ಪಾವತಿಸಿ, ವಾಟ್ಸ್‌ಆ್ಯಪ್ ಮತ್ತು ಎಸ್‌ಎಂಎಸ್ ಮೂಲಕ ಅರ್ಜಿ ಸ್ಥಿತಿಗತಿಯನ್ನು ತಿಳಿದುಕೊಳ್ಳಿ. ನಿಮ್ಮ ಎಲ್ಲ ಪ್ರಮಾಣಪತ್ರಗಳು ಡಿಜಿಲಾಕರ್‌ನಲ್ಲಿ ಭದ್ರವಾಗಿರಲಿವೆ. ಕನ್ನಡದಲ್ಲೂ ಅರ್ಜಿಗಳು ಲಭ್ಯವಿದ್ದು, ಸಾರ್ವಜನಿಕರ ಸುಲಭ ಲಭ್ಯತೆಗಾಗಿ ಈ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಕುಡತಿನಿ ರೈಲ್ವೆ ಮೇಲ್ಸೇತುವೆ ದುರಸ್ತಿ: ಅಕ್ಟೋಬರ್ 25 ರವರೆಗೆ ವಾಹನ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ನಿಗದಿ
ಬಳ್ಳಾರಿ : ಕುಡತಿನಿ ರೈಲ್ವೆ ನಿಲ್ದಾಣದ ಆವರಣದಲ್ಲಿರುವ ರಸ್ತೆ ಮೇಲ್ಸೇತುವೆ (ಆರ್‌ಒಬಿ ಸಂ. 102) ತುರ್ತು ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ, ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಈ ನಿರ್ಬಂಧವು ಅಕ್ಟೋಬರ್ 25 ರವರೆಗೆ ಜಾರಿಯಲ್ಲಿರುತ್ತದೆ.
ಕುಡತಿನಿ ರೈಲ್ವೆ ಮೇಲ್ಸೇತುವೆಯಲ್ಲಿ (ಆರ್‌ಒಬಿ 102) ಅಳವಡಿಸಲಾಗಿದ್ದ ಸ್ಟಿçಪ್ ಸೀಲ್ ಎಕ್ಸ್ಪಾನ್ಶನ್ ಜಾಯಿಂಟ್‌ನ ಲಿಂಕ್ ಬಾರ್ ಮುರಿದು, ಜಾಯಿಂಟ್ ಅಸೆಂಬ್ಲಿ ಸಡಿಲಗೊಂಡಿತ್ತು. ನಿರಂತರ ಭಾರಿ ವಾಹನ ಸಂಚಾರ ಹಾಗೂ ಕಂಪನಗಳಿAದ ಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಸ್ತಿತ್ವದಲ್ಲಿರುವ ಕಾಂಕ್ರೀಟ್ ತೆರವು, ಆಂಕರೆಜ್ ಮರುಹೊಂದಾಣಿಕೆ ಹಾಗೂ ಬೋಲ್ಟ್ಗಳ ಬದಲಾವಣೆ ಸೇರಿದಂತೆ ಅಗತ್ಯ ತಾಂತ್ರಿಕ ದುರಸ್ತಿ ಕೈಗೊಳ್ಳಲು ರೈಲ್ವೆ ಇಲಾಖೆ ಸಂಚಾರ ಸ್ಥಗಿತಕ್ಕೆ ಮನವಿ ಮಾಡಿತ್ತು. ಇದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಲೋಕೋಪಯೋಗಿ ಇಲಾಖೆ ಹಾಗೂ ಸಹಾಯಕ ಆಯುಕ್ತರು ನಿರಾಕ್ಷೇಪಣಾ ಪತ್ರ ಸಲ್ಲಿಸಿದ್ದರು.
ಪರ್ಯಾಯ ಮಾರ್ಗ:
ರಸ್ತೆ ಮೇಲ್ಸೇತುವೆ ಮುಚ್ಚಿರುವ ಅವಧಿಯಲ್ಲಿ ವಾಹನ ಸವಾರರು ಕುಡಿತಿನಿ – ಸಿದ್ಧಮ್ಮನಹಳ್ಳಿ (ಎಸ್‌ಹೆಚ್-132) ಮಾರ್ಗದ ಮೂಲಕ, ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 100 (ಏಳುಬೆಂಚಿ ರಸ್ತೆ) ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ಪರ್ಯಾಯ ಮಾರ್ಗವಾದ ರೈಲ್ವೆ ಗೇಟ್ ಸಂ. 100 (ಏಳುಬೆಂಚಿ ರಸ್ತೆ) ಹದಗೆಟ್ಟಿದ್ದು, ಗುಂಡಿ ಬಿದ್ದಿರುವ ಜಾಗಗಳಿಗೆ ತಕ್ಷಣ ಜಲ್ಲಿ/ಮುರಂ ಹಾಕಿ ರಸ್ತೆಯನ್ನು ಸಮತಟ್ಟುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಕಾಮಗಾರಿ ನಡೆಯುವ ಜಾಗದಲ್ಲಿ ಬ್ಯಾರಿಕೇಡ್‌ಗಳು, ಎಚ್ಚರಿಕೆ ಫಲಕಗಳು ಹಾಗೂ ರಾತ್ರಿ ವೇಳೆ ಸೂಕ್ತ ಬೆಳಕಿನ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಬೇಕು.
ದುರಸ್ತಿ ಕಾಮಗಾರಿ ಪೂರ್ಣಗೊಂಡು, ತಾಂತ್ರಿಕ ಅಧಿಕಾರಿಗಳು ಸೇತುವೆಯ ಸುರಕ್ಷತೆಯನ್ನು ದೃಢಪಡಿಸಿದ ನಂತರವೇ ಎಂದಿನಂತೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ವಾಹನ ಸವಾರರು ಮತ್ತು ಸಾರ್ವಜನಿಕರು ಈ ಬದಲಾವಣೆಯನ್ನು ಗಮನಿಸಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.

