HomeIndiaBREAKING : ಸೂರತ್'ನಲ್ಲಿ ಮ್ಯಾನ್ ಹೋಲ್ ಗೆ ಬಿದ್ದ 2 ವರ್ಷದ ಮಗು, ರಕ್ಷಣಾ ಕಾರ್ಯಾಚರಣೆ...

BREAKING : ಸೂರತ್’ನಲ್ಲಿ ಮ್ಯಾನ್ ಹೋಲ್ ಗೆ ಬಿದ್ದ 2 ವರ್ಷದ ಮಗು, ರಕ್ಷಣಾ ಕಾರ್ಯಾಚರಣೆ ಆರಂಭ

ಸೂರತ್ ನಲ್ಲಿ ಮ್ಯಾನ್ ಹೋಲ್ ಗೆ ಎರಡು ವರ್ಷದ ಬಾಲಕ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.ಎರಡು ವರ್ಷದ ಬಾಲಕ ಮ್ಯಾನ್ ಹೋಲ್ ಗೆ ಬಿದ್ದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಜಿಲ್ಲೆಯ ವೈರವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಹಿತಿ ಪಡೆದ ನಂತರ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ತಂಡವು ಸ್ಥಳಕ್ಕೆ ತಲುಪಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

“ಭಾರಿ ವಾಹನದಿಂದ ಮ್ಯಾನ್ ಹೋಲ್ ಚೇಂಬರ್ ನ ಮುಚ್ಚಳಕ್ಕೆ ಹಾನಿಯಾಗಿದೆ. 2 ವರ್ಷದ ಬಾಲಕ ಅದರಲ್ಲಿ ಬಿದ್ದಿದ್ದಾನೆ. ನಾವು ಸುಮಾರು 100-150 ಮೀಟರ್ ಪ್ರದೇಶವನ್ನು ಪರಿಶೀಲಿಸಿದ್ದೇವೆ” ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪಾರಿಖ್ ಹೇಳಿದ್ದಾರೆ.

“ಮಗುವನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ… ಇಲ್ಲಿ 60-70 ಕಾರ್ಮಿಕರನ್ನು ನಿಯೋಜಿಸಲಾಗಿದೆ” ಎಂದು ಅವರು ಹೇಳಿದರು. ಮಗುವನ್ನು ರಕ್ಷಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular