ಬೆಳಗಾವಿ : ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ನಿಲ್ಲುವ ಹಾಗೆ ಕಾಣುತ್ತಿಲ್ಲ. ಜಾತ್ರೆ ಬಂದೋಬಸ್ತ್ ಗೆ ಬಂದಿದ್ದ ಎಎಸ್ ಐ ಹೃದಯಾತದಿಂದ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ASI ‘ಎಲ್ ಜೆ ಮೀರಾನಾಯಕ್’ (56) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು.
ಗೋಕಾಕ್ ನ ಲಕ್ಷ್ಮೀದೇವಿ ಜಾತ್ರೆ ಬಂದೋಬಸ್ತ್ ಗೆ ಬಂದಿದ್ದ ಎಲ್ ಜೆ ಮೀರಾನಾಯಕ್ ಬಾಲಕರ ವಸತಿ ನಿಲಯದಲ್ಲಿ ತಂಗಿದ್ದರು. ಆದರೆ ಧಿಡೀರ್ ಹೃದಯಾಘಾತದಿಂದ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
You Might Also Like
TAGGED:ಹಾರ್ಟ್ ಅಟ್ಯಾಕ್