HomeLatest NewsBREAKING : 'ಬೆಂಗಳೂರು ಕಾಲ್ತುಳಿತ ದುರಂತ' ಕೇಸ್ : IPS ಅಧಿಕಾರಿ 'ವಿಕಾಸ್ ಕುಮಾರ್' ಅಮಾನತು...

BREAKING : ‘ಬೆಂಗಳೂರು ಕಾಲ್ತುಳಿತ ದುರಂತ’ ಕೇಸ್ : IPS ಅಧಿಕಾರಿ ‘ವಿಕಾಸ್ ಕುಮಾರ್’ ಅಮಾನತು ರದ್ದುಪಡಿಸಿದ CAT.!

ಬೆಂಗಳೂರು : ಬೆಂಗಳೂರು ಕಾಲ್ತುಳಿತ ದುರಂತ ಕೇಸ್ ನಲ್ಲಿ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ರನ್ನು ಅಮಾನತು ಮಾಡಿತ್ತು. ಇದೀಗ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ನಿರ್ಧಾರವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಮಂಗಳವಾರ ರದ್ದುಪಡಿಸಿದೆ. ಹಾಗೂ ಹಿಂದಿನ ಎಲ್ಲಾ ಭತ್ಯೆ ಹಾಗೂ ಸೌಲಭ್ಯ ಒದಗಿಸಲು ನಿರ್ದೇಶನ ನೀಡಿದೆ.

ಕಾಲ್ತುಳಿತ ದುರಂತದಲ್ಲಿ ತಮ್ಮನ್ನು ಅಮಾನತು ಮಾಡಿದ ಸರ್ಕಾರದ ಆದೇಶ ಪ್ರಶ್ನಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧಿಕರಣ (CAT)ಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ಅರ್ಜಿ ಸಲ್ಲಿಸಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತ ಸಂಭವಿಸಿ 11 ಜನರು ಆರ್ ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸೇರಿದಂತೆ ಹಲವರನ್ನು ಸಸ್ಪೆಂಡ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.ನಂತರ ವಿಕಾಸ್ ಕುಮಾರ್ ಅವರು ತಮ್ಮ ಅಮಾನತು ಆದೇಶ ಪ್ರಶ್ನಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು.. ಇದೀಗ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ನಿರ್ಧಾರವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಮಂಗಳವಾರ ರದ್ದುಪಡಿಸಿದೆ. ಹಾಗೂ ಹಿಂದಿನ ಎಲ್ಲಾ ಭತ್ಯೆ ಹಾಗೂ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular