HomeCrimeBREAKING: ಚರಂಡಿ ನೀರು ಹರಿವಿನ ವಿಚಾರವಾಗಿ ಗಲಾಟೆ; ಹಲ್ಲೆಗೊಳಗಾಗಿದ್ದ ಓರ್ವ ಸಾವು; 8 ಜನರ ವಿರುದ್ಧ...

BREAKING: ಚರಂಡಿ ನೀರು ಹರಿವಿನ ವಿಚಾರವಾಗಿ ಗಲಾಟೆ; ಹಲ್ಲೆಗೊಳಗಾಗಿದ್ದ ಓರ್ವ ಸಾವು; 8 ಜನರ ವಿರುದ್ಧ FIR

ತುಮಕೂರು: ಚರಂಡಿ ನೀರು ಹರಿದು ಹೋಗುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕುಟುಂಬದವರು ಮಾರಣಾಂತಿಕವಾಗಿ ಹೊಡೆದಾಡಿಕೊಂಡಿದ್ದು, ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕನ್ನುಘಟ್ಟ ಗ್ರಾಮದಲ್ಲಿ ನಡೆದಿದೆ.

ಮೃತನನ್ನು 34 ವರ್ಷದ ವಸಂತ್ ಕುಮಾರ್ ಎಂದು ಗುರುತಿಸಲಾಗಿದೆ. ಚರಂಡಿ ನೀರಿನ ವಿಚಾರವಾಗಿ ಶಿವಬಸವಯ್ಯ ಹಾಗೂ ಬಸವಲಿಂಗಯ್ಯ ಕುಟುಂಬದ ನಡುವೆ ಗಲಾಟೆ ನಡೆದಿತ್ತು. ಬಸವಲಿಂಗಯ್ಯ ಕುಟುಂಬದವರು ಶಿವಬಸವಯ್ಯ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭಿರವಾಗಿ ಗಾಯಗೊಂಡಿದ್ದ ಶಿವಬಸವಯ್ಯ ಪುತ್ರ ವಸಂತ್ ಕುಮಾರ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ಸಂಬಂಧ ಬಸಲಿಂಗಯ್ಯ, ಕುಮಾರ್, ವಿಜಯ್ ಸೇರಿದಂತೆ 8 ಜನರ ವಿರುದ್ಧ ಕೇಸ್ ದಾಖಲಾಗಿದ್ದು, ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular