HomeLatest NewsSHOCKING : ಆಟವಾಡುತ್ತಾ ಗೊಂಬೆಯನ್ನೇ ನುಂಗಿದ ಬಾಲಕ : ಎಕ್ಸ್’ರೇ ನೋಡಿ ವೈದ್ಯರೇ ಶಾಕ್.!

SHOCKING : ಆಟವಾಡುತ್ತಾ ಗೊಂಬೆಯನ್ನೇ ನುಂಗಿದ ಬಾಲಕ : ಎಕ್ಸ್’ರೇ ನೋಡಿ ವೈದ್ಯರೇ ಶಾಕ್.!


ಇಂದಿನ ಕಾಲದ ಮಕ್ಕಳಿಗೆ ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಮತ್ತು ಗೊಂಬೆಗಳು ಅಚ್ಚುಮೆಚ್ಚಿನ ಗೆಳೆಯರು. ಅವರ ವಿಡಿಯೋ ನೋಡುತ್ತಲೇ ಊಟ ಮಾಡುತ್ತಾರೆ, ಆ ಗೊಂಬೆಗಳನ್ನು ಹಿಡಿದುಕೊಂಡೇ ಮಲಗುತ್ತಾರೆ. ಒಂದು ವೇಳೆ ಆ ಗೊಂಬೆಗಳು ಕಾಣದಿದ್ದರೆ ಪೋಷಕರ ಜೊತೆ ಯುದ್ಧಕ್ಕೇ ಇಳಿಯುತ್ತಾರೆ! ಆದರೆ, ಇದೇ ಆಟಿಕೆಗಳು ಈಗ ಪ್ರಾಣಕ್ಕೆ ಕಂಟಕವಾಗುತ್ತಿವೆ. ಅಹಮದಾಬಾದ್ನಲ್ಲಿ ನಡೆದ ಘಟನೆಯೊಂದು ವೈದ್ಯರಿಗೇ ಸವಾಲು ಹಾಕಿದೆ.

ಏನಿದು ಘಟನೆ? ಒಂದೂವರೆ ವರ್ಷದ ಬಾಲಕ ವಂಶ್, ಆಟವಾಡುತ್ತಾ ತನ್ನ ನೆಚ್ಚಿನ ಗೊಂಬೆಯನ್ನು ಬಾಯಿಗೆ ಹಾಕಿಕೊಂಡು ನುಂಗಿದ್ದಾನೆ. ಮಗುವಿನ ಬಾಯಿಯಿಂದ ಮಾತು ಬಾರದೆ ಇರುವುದನ್ನು ಮತ್ತು ಮಗು ದಿಢೀರನೆ ಕೆಳಗೆ ಬಿದ್ದಿದ್ದನ್ನು ಗಮನಿಸಿದ ಪೋಷಕರು ಗಾಬರಿಯಿಂದ ಕೂಡಲೇ ಆಸ್ಪತ್ರೆಗೆ ಓಡಿದ್ದಾರೆ.ವೈದ್ಯರು ಪರೀಕ್ಷೆ ನಡೆಸಿ ಎಂಡೋಸ್ಕೋಪಿ ಮಾಡಿದಾಗ, ಮಗುವಿನ ಗಂಟಲಿನಲ್ಲಿ ಹಲ್ಕ್ ಗೊಂಬೆ ಸಿಲುಕಿರುವುದು ಪತ್ತೆಯಾಯಿತು. ಆದರೆ ಅದನ್ನು ಹೊರತೆಗೆಯುವುದು ಸುಲಭದ ಕೆಲಸವಾಗಿರಲಿಲ್ಲ.ವೈದ್ಯರು ಉಪಕರಣಗಳ ಮೂಲಕ ಗೊಂಬೆಯನ್ನು ಹಿಡಿಯಲು ಪ್ರಯತ್ನಿಸಿದಾಗಲೆಲ್ಲಾ ಅದು ಜಾರಿ ಹೋಗುತ್ತಿತ್ತು. ಇದು ಹಿರಿಯ ವೈದ್ಯರಿಗೂ ಬೆವರುವಂತೆ ಮಾಡಿತು.

ಹಲವಾರು ಗಂಟೆಗಳ ಕಠಿಣ ಪರಿಶ್ರಮದ ನಂತರ ವೈದ್ಯರು ಯಶಸ್ವಿಯಾಗಿ ಆ ಗೊಂಬೆಯನ್ನು ಹೊರತೆಗೆದರು. ಮಗು ಪ್ರಾಣಾಪಾಯದಿಂದ ಪಾರಾದ ನಂತರ ಪೋಷಕರು ನಿಟ್ಟುಸಿರು ಬಿಟ್ಟರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೋಷಕರಿಗೆ ವೈದ್ಯರ ಕಿವಿಮಾತು:
ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಪೋಷಕರು ಈ ಕೆಳಗಿನ ಜಾಗ್ರತೆ ವಹಿಸಬೇಕು:

  1. ಗೊಂಬೆಯ ಗಾತ್ರ: ಸಣ್ಣ ಮಕ್ಕಳಿಗೆ ಅತೀ ಸಣ್ಣದಾದ ಅಥವಾ ಸುಲಭವಾಗಿ ಬಾಯಿಯೊಳಗೆ ಹೋಗುವಂತಹ ಗೊಂಬೆಗಳನ್ನು ಕೊಡಬೇಡಿ.
  2. ನಿರಂತರ ನಿಗಾ: ಮಕ್ಕಳು ಆಟವಾಡುವಾಗ ಯಾರಾದರೂ ಒಬ್ಬರು ಹಿರಿಯರು ಅವರ ಮೇಲಿ ನಿಗಾ ಇಡುವುದು ಕಡ್ಡಾಯ.
  3. ಮೂಲೆಗಳು: ಚೂಪಾದ ತುದಿಗಳಿರುವ ಅಥವಾ ಸಣ್ಣ ಬ್ಯಾಟರಿಗಳಿರುವ ಆಟಿಕೆಗಳಿಂದ ಮಕ್ಕಳನ್ನು ದೂರವಿಡಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular