ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಆಕ್ಷನ್ ರೀಲ್ಸ್ ಮಾಡುವ ವೇಳೆ ಕಾರ್ ಗೆ ಬೈಕ್ ಡಿಕ್ಕಿ ಹೊಡೆದು 15 ವರ್ಷಕ ಬಾಲಕ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ವಿದ್ಯಾನಗರ ಠಾಣೆ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶದಿಂದ ಕಾರ್ ಖರೀದಿಸಿದ್ದ ಅಕ್ಷಯ ಪಾರ್ಕ್ ನಿವಾಸಿ ಸಂತೋಷ್ ನಾಗರಾಜ ರಾಯ್ಕರ್ ಮತ್ತು ಅವರ ಪುತ್ರನನ್ನು ಬಂಧಿಸಲಾಗಿದೆ. ಅಪ್ರಾಪ್ತ ಪುತ್ರನಿಗೆ ಕಾರ್ ಕೊಟ್ಟಿದ್ದ ಸಂತೋಷ್ ಜೈಲು ಸೇರುವಂತಾಗಿದೆ. ಇಬ್ಬರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಉಣಕಲ್ ಮಹಾಲಕ್ಷ್ಮಿ ಲೇಔಟ್ ಶೇಜವಾಡ್ಕರ್ ಬಡಾವಣೆಯಲ್ಲಿ ಗುರುವಾರ ಆಕ್ಷನ್ ರೀಲ್ಸ್ ಮಾಡಲು ಹೋಗಿ ಬಾಲಕ ನಮಿಷ್ ಸಂಗಳದ(15) ಅಪಘಾತಕ್ಕೀಡಾಗಿ ಮೃತಪಟ್ಟಿದ್ದ. ಕಾರ್ ಮತ್ತು ಸ್ಕೂಟಿ ನಡುವೆ ಆಕ್ಷನ್ ರೀಲ್ಸ್ ಮಾಡಲು ಹೋದಾಗ ಅಪಘಾತ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆ ಪೋಲಿಸರು ಸಂತೋಷ್ ನಾಗರಾಜ್ ರಾಯ್ಕರ್ ಮತ್ತು ಅವರ ಪುತ್ರ ಇಬ್ಬರನ್ನು ಬಂಧಿಸಿದ್ದಾರೆ.

