ಏಪ್ರಿಲ್ 1ರಿಂದ ರಾಜ್ಯದ 66 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಶೇಕಡ 3ರಿಂದ 5ರಷ್ಟು ಹೆಚ್ಚಳವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ವಾರ್ಷಿಕ ಹಣದುಬ್ಬರ ಆಧಾರದಲ್ಲಿ ಹೆದ್ದಾರಿ ಟೋಲ್ ದರ ಪರಿಷ್ಕರಣೆ ಮಾಡಿದ್ದು, ಖಾಸಗಿ ವಾಹನಗಳ ವಾರ್ಷಿಕ ಪಾಸ್ ದರ 3,000 ರೂ.ನಿಂದ 3075 ರೂ.ಗೆ ಏರಿಕೆಯಾಗಿದೆ.
ಇದೀಗ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಸೇರಿದಂತೆ ರಾಜ್ಯದ 66 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಪ್ರಿಲ್ 1ರಿಂದ ಟೋಲ್ ಶುಲ್ಕ ದುಬಾರಿಯಾಗಲಿದೆ. ಸರ್ಕಾರದ ನಿಯಮಾವಳಿಯಂತೆ ಪ್ರತಿ ವರ್ಷ ಟೋಲ್ ದರ ಏರಿಕೆಯಾಗಲಿದ್ದು, ಈ ವರ್ಷವೂ ಶೇಕಡ 3ರಿಂದ 5ರವರೆಗೆ ಟೋಲ್ ದರ ಹೆಚ್ಚಳವಾಗಲಿದೆ. ದರ ಹೆಚ್ಚಳ ಕುರಿತಂತೆ ಸೋಮವಾರ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎನ್ನಲಾಗಿದೆ.

