BIG NEWS: ಸಿಎಂ ಬದಲಾವಣೆ ಬಿಜೆಪಿಯವರ ಸೃಷ್ಟಿ: ಸಚಿವ ಬೋಸರಾಜು ಕಿಡಿ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುದು ಬಿಜೆಪಿಯವರ ಸೃಷ್ಟಿ ಎಂದು ಸಚಿವ ಬೋಸರಾಜು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬೋಸರಾಜು, ಸಿಎಂ ಬದಲಾವಣೆ ಎಂದು ಸರ್ಕಾರ ಬಂದಾಗಿನಿಂದ ಚರ್ಚೆಯಾಗುತ್ತಿದೆ. ಇದನ್ನು ಯಾರು ಮಾಡುತ್ತಿದ್ದಾರೆ? ಬಿಜೆಪಿಯವರು ಈ ರೀತಿ ಸೃಷ್ಟಿ ಮಾಡುತ್ತಿದ್ದಾರೆ. ಸರ್ಕಾರವನ್ನು ವೀಕ್ ಮಾಡಬೇಕು. ಸಿಎಂ-ಡಿಸಿಎಂ ನಡುವೆ ಮನಸ್ತಾಪ ತಂದಿಡಬೇಕು ಎಂದು ಬಿಜೆಪಿಯವರು ಮಾಡುತ್ತಿರುವ ತಂತ್ರ ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ನವರಿ ಸೇರಿ ಸರ್ಕಾರ ದುರ್ಬಲಗೊಳಿಸಲು ಈ ರೀತಿ ಮಾಡುತ್ತಿದ್ದಾರೆ. ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾದಾಗಿನಿಂದ ಅದೆಷ್ಟು ಬಾರಿ ಸಿಎಂ ಬದಲಾವಣೆ ಎಂದು ಹೇಳಿದ್ದಾರೆ. ವಿಪಕ್ಷ ನಾಯಕ ಅಶೋಕ್ ಎಷ್ಟು ಬಾರಿ ಹೇಳಿಲ್ಲ. ರಾಜ್ಯಮಟ್ಟದ ನಾಯಕರಾಗಿದ್ದು ಜವಾಬ್ದಾರಿಗಳಿಂದ ಮಾತನಾಡಬೇಕು. ಅದನ್ನು ಬಿಟ್ಟು ಸಿಎಂ ಬದಲಾವಣೆ ಎಂದು ದಿನಾಂಕಗಳನ್ನು ಹೇಳುತ್ತಿದ್ದಾರೆ. ಜನ ಇದಲ್ಲೆವನ್ನೂ ಗಮನಿಸುತ್ತಿದ್ದಾರೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read