HomeKarnatakaವಿಧಾನಸೌಧದಲ್ಲಿ ಪುಸ್ತಕ ಮೇಳ : ಹರಿದು ಬಂದ ಸಾಹಿತ್ಯಾಸಕ್ತರ ದಂಡು |WATCH VIDEO

ವಿಧಾನಸೌಧದಲ್ಲಿ ಪುಸ್ತಕ ಮೇಳ : ಹರಿದು ಬಂದ ಸಾಹಿತ್ಯಾಸಕ್ತರ ದಂಡು |WATCH VIDEO

ಬೆಂಗಳೂರು : ವಿಧಾನಸೌಧದಲ್ಲಿ ಸರ್ಕಾರ ಪುಸ್ತಕ ಮೇಳ ಆಯೋಜಿಸಿದ್ದು, ಸಾಹಿತ್ಯಾಸಕ್ತರ ದಂಡೇ ಹರಿದು ಬಂದಿದೆ.

ನಮ್ಮ ಸಾಹಿತ್ಯದ ಅಭಿರುಚಿಯನ್ನು ಹುಟ್ಟು ಹಾಕಬೇಕು ಎಂಬ ಸದುದ್ದೇಶದಿಂದ ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ಪ್ರಪ್ರಥಮ ಬಾರಿಗೆ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿದ್ದಾರೆ. ಫೆಬ್ರವರಿ 27ರಂದು ಸಿಎಂ ಸಿದ್ದರಾಮಯ್ಯ & ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರಿಂದ ಉದ್ಘಾಟನೆಗೊಂಡ ಈ ಪುಸ್ತಕ ಮೇಳಕ್ಕೆ ಸಾಹಿತ್ಯಾಸಕ್ತರ ದಂಡೇ ಹರಿದು ಬರುತ್ತಿದೆ. ಈ ಸಾಹಿತ್ಯ ಜಾತ್ರೆಯಲ್ಲಿ 250 ಪುಸ್ತಕ ಮಾರಾಟ ಮಳಿಗೆಗಳು, ನೂರಾರು ಸಾಹಿತಿಗಳ ಸಾವಿರಾರು ಪುಸ್ತಕಗಳು ಲಭ್ಯವಿದೆ. ಈ ವಿಭಿನ್ನ ಪ್ರಯತ್ನದ ಬಗ್ಗೆ ಸಾರ್ವಜನಿಕರು, ಲೇಖಕರು, ಓದುಗರು, ಪ್ರಕಾಶಕರು ಏನ್ ಹೇಳ್ತಾರೆ ಅನ್ನೋದನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular