HomeIndiaVideo | 'ರಕ್ಷಾಬಂಧನ' ದಿನದಂದೇ ಮೃತಪಟ್ಟ ಸಹೋದರ; ಕಣ್ಣೀರಿಡುತ್ತಲೇ ರಾಖಿ ಕಟ್ಟಿದ ಸಹೋದರಿ

Video | ‘ರಕ್ಷಾಬಂಧನ’ ದಿನದಂದೇ ಮೃತಪಟ್ಟ ಸಹೋದರ; ಕಣ್ಣೀರಿಡುತ್ತಲೇ ರಾಖಿ ಕಟ್ಟಿದ ಸಹೋದರಿ

Beyond Life: Sister Ties Rakhi on Brother's Wrist on Raksha Bandhan 2023 Who Died of Sudden Heart Attack (Watch Video) | 📰 LatestLY

ಬುಧವಾರದಂದು ದೇಶದಾದ್ಯಂತ ರಕ್ಷಾ ಬಂಧನ ದಿನವನ್ನು ಭರ್ಜರಿಯಾಗಿ ಆಚರಿಸಲಾಗಿದ್ದು, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಸಂಭ್ರಮಿಸಿದ್ದಾರೆ. ಇದರ ಮಧ್ಯೆ ತೆಲಂಗಾಣದಲ್ಲಿ ಇದೇ ದಿನದಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು, ನೆಟ್ಟಿಗರ ಕಣ್ಣಂಚನ್ನು ತೇವಗೊಳಿಸಿದೆ.

ಹೌದು, ರಕ್ಷಾ ಬಂಧನ ದಿನದಂದೇ ತನ್ನ ಪ್ರೀತಿಯ ಅಣ್ಣ ತೀವ್ರ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಸಹೋದರಿ ಕಣ್ಣೀರಿಡುತ್ತಲೇ ಕೊನೆಯ ಬಾರಿಗೆ ರಾಖಿ ಕಟ್ಟಿದ್ದಾರೆ. ಈ ದೃಶ್ಯ ಅಲ್ಲಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದ್ದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಆ ಸಹೋದರಿಯ ನೋವಿನ ಕ್ಷಣಕ್ಕೆ ಮನ ಮಿಡಿದಿದ್ದಾರೆ. ಅಲ್ಲದೆ ಮೃತ ವ್ಯಕ್ತಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular