HomeAuto1.95 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಕಾರ್ ಖರೀದಿಸಿದ ನಟ ಅಜಯ್ ದೇವಗನ್

1.95 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಕಾರ್ ಖರೀದಿಸಿದ ನಟ ಅಜಯ್ ದೇವಗನ್

ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಐಷಾರಾಮಿ ಕಾರು ಸಂಗ್ರಹಿಸುವ ಕ್ರೇಜ್ ಇದೆ. ತಮ್ಮಿಷ್ಟದ ದುಬಾರಿ ಕಾರುಗಳನ್ನ ಖರೀದಿ ಮಾಡುವವರ ಪೈಕಿ ನಟ ಅಜಯ್ ದೇವಗನ್ 1.95 ಕೋಟಿ ಮೌಲ್ಯದ ಹೊಸ BMW i7 ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ.

ಈ ಹೊಸ ಕಾರು ಖರೀದಿಯೊಂದಿಗೆ ಅಜಯ್ ದೇವಗನ್ ಅವರು ರಿತೇಶ್ ದೇಶಮುಖ್, ಪೂಜಾ ಬಾತ್ರಾ, ಮಾಧುರಿ ದೀಕ್ಷಿತ್, ಮಂದಿರಾ ಬೇಡಿ, ಮಹೇಶ್ ಬಾಬು ಮತ್ತು ಇತರ ನಟರೊಂದಿಗೆ ಎಲೆಕ್ಟ್ರಿಕ್ ವಾಹನಗಳ ಮಾಲೀಕರಾಗಿದ್ದಾರೆ. ಈ ಪೈಕಿ ರಿತೇಶ್ ದೇಶ್‌ಮುಖ್, ಅಜಯ್ ದೇವಗನ್ ಅವರಂತೆ ಬಿಎಂಡಬ್ಲ್ಯು ಐಷಾರಾಮಿ ಎಲೆಕ್ಟ್ರಿಕ್ ವಾಹನವನ್ನು ಹೊಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಜಯ್ ದೇವಗನ್ ಅವರ BMW i7 ಜರ್ಮನ್ ವಾಹನ ತಯಾರಕರ ಹೊಸ ವಿನ್ಯಾಸದ ಜೊತೆಗೆ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕಾರನ್ನು ಬ್ಲ್ಯಾಕ್ ಸಫೈರ್ ಮೆಟಾಲಿಕ್, ಇಂಡಿವಿಜುವಲ್ ದ್ರಾವಿಟ್ ಗ್ರೇ ಮೆಟಾಲಿಕ್, ಇಂಡಿವಿಜುವಲ್ ಟಾಂಜಾನೈಟ್ ಬ್ಲೂ ಮೆಟಾಲಿಕ್, ಬ್ರೂಕ್ಲಿನ್ ಗ್ರೇ ಮೆಟಾಲಿಕ್, ಕಾರ್ಬನ್ ಬ್ಲ್ಯಾಕ್ ಮೆಟಾಲಿಕ್, ಮಿನರಲ್ ವೈಟ್ ಮೆಟಾಲಿಕ್ ಮತ್ತು ಆಕ್ಸೈಡ್ ಗ್ರೇ ಮೆಟಾಲಿಕ್ ಸೇರಿದಂತೆ ಬಹು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಅನೇಕ ಬಣ್ಣದ ಆಯ್ಕೆಗಳಲ್ಲಿ ನಟ ಅಜಯ್ ದೇವಗನ್ ಟ್ವಿಲೈಟ್ ಪರ್ಪಲ್ ಪರ್ಲ್ ಮೆಟಾಲಿಕ್ ಪೇಂಟ್ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈಗ ಅಜಯ್ ದೇವಗನ್ ಅವರ ಗ್ಯಾರೇಜ್‌ನಲ್ಲಿರುವ BMW i7, ‘i’ ಸರಣಿಯ ಅತ್ಯಂತ ದುಬಾರಿ ಮಾದರಿಗಳಲ್ಲಿ ಒಂದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular