HomeAutoಬಿಎಂಡಬ್ಲ್ಯು ಎಫ್ 450 ಜಿಎಸ್ ಬುಕಿಂಗ್ ಓಪನ್: ಏಪ್ರಿಲ್ 23ಕ್ಕೆ ರಸ್ತೆಗಿಳಿಯಲಿದೆ ಹೊಸ ಅಡ್ವೆಂಚರ್ ಬೈಕ್

ಬಿಎಂಡಬ್ಲ್ಯು ಎಫ್ 450 ಜಿಎಸ್ ಬುಕಿಂಗ್ ಓಪನ್: ಏಪ್ರಿಲ್ 23ಕ್ಕೆ ರಸ್ತೆಗಿಳಿಯಲಿದೆ ಹೊಸ ಅಡ್ವೆಂಚರ್ ಬೈಕ್

ಜರ್ಮನಿಯ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಬಿಎಂಡಬ್ಲ್ಯು ಮೊಟೊರಾಡ್, ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಹುನಿರೀಕ್ಷಿತ ‘ಬಿಎಂಡಬ್ಲ್ಯು ಎಫ್ 450 ಜಿಎಸ್’ ಬೈಕ್ ನ ಬುಕಿಂಗ್ ಅನ್ನು ಅಧಿಕೃತವಾಗಿ ಆರಂಭಿಸಿದೆ. ಏಪ್ರಿಲ್ 23 ರಂದು ಈ ಬೈಕ್ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಅದಕ್ಕೂ ಮುನ್ನವೇ ಬೈಕ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಬಿಎಂಡಬ್ಲ್ಯು ಮತ್ತು ಟಿವಿಎಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಬೈಕ್ ತಯಾರಾಗುತ್ತಿರುವುದು ವಿಶೇಷ.

ಎಂಜಿನ್ ಸಾಮರ್ಥ್ಯ ಮತ್ತು ತಾಂತ್ರಿಕತೆ ಹೊಸ ಬಿಎಂಡಬ್ಲ್ಯು ಎಫ್ 450 ಜಿಎಸ್ 420ಸಿಸಿ ಟ್ವಿನ್-ಸಿಲಿಂಡರ್ ಎಂಜಿನ್ ಹೊಂದಿದೆ. ಇದು 48 ಹೆಚ್ ಪಿ ಪವರ್ ಮತ್ತು 43 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆರು ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಈ ಬೈಕ್ ನಲ್ಲಿ ಸ್ಲಿಪ್ಪರ್ ಕ್ಲಚ್ ಮತ್ತು ಕ್ವಿಕ್ ಶಿಫ್ಟರ್ ಸೌಲಭ್ಯಗಳನ್ನು ನೀಡಲಾಗಿದೆ. ಆಫ್-ರೋಡ್ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾದ ಈ ಬೈಕ್ ಕೇವಲ 178 ಕೆಜಿ ತೂಕವನ್ನು ಹೊಂದಿದೆ.

ವೈಶಿಷ್ಟ್ಯಗಳು ಮತ್ತು ವೆರಿಯಂಟ್ ಗಳು ಈ ಬೈಕ್ ಬೇಸಿಕ್, ಎಕ್ಸ್‌ಕ್ಲೂಸಿವ್, ಸ್ಪೋರ್ಟ್ ಮತ್ತು ಜಿಎಸ್ ಟ್ರೋಫಿ ಎಂಬ ನಾಲ್ಕು ವೆರಿಯಂಟ್ ಗಳಲ್ಲಿ ಲಭ್ಯವಿರಲಿದೆ. ಇದರಲ್ಲಿ ಜಿಎಸ್ ಟ್ರೋಫಿ ಆವೃತ್ತಿಯು ಆಫ್-ರೋಡ್ ಚಾಲನೆಗೆ ಹೆಚ್ಚು ಸೂಕ್ತವಾಗಿದ್ದು, ಟ್ಯೂಬ್ ಲೆಸ್ ವೈರ್-ಸ್ಪೋಕ್ ವೀಲ್ ಗಳನ್ನು ಹೊಂದಿದೆ. ಬೈಕ್ ನಲ್ಲಿ 6.5 ಇಂಚಿನ ಟಿಎಫ್ ಟಿ ಡಿಸ್ ಪ್ಲೇ, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ನ್ಯಾವಿಗೇಷನ್ ಮತ್ತು ರೈಡಿಂಗ್ ಮೋಡ್ ಗಳಂತಹ ಆಧುನಿಕ ಫೀಚರ್ ಗಳನ್ನು ಅಳವಡಿಸಲಾಗಿದೆ. ಭದ್ರತೆಗಾಗಿ ಡ್ಯುಯಲ್ ಚಾನಲ್ ಎಬಿಎಸ್ ಸೌಲಭ್ಯವನ್ನು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಲೆ ಎಷ್ಟು ಇರಬಹುದು? ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಕೆಟಿಎಂ 390 ಅಡ್ವೆಂಚರ್ ಬೈಕ್ ಗಳಿಗೆ ಈ ಬಿಎಂಡಬ್ಲ್ಯು ಬೈಕ್ ನೇರ ಸ್ಪರ್ಧೆ ನೀಡಲಿದೆ. ಮೂಲಗಳ ಪ್ರಕಾರ, ಭಾರತದಲ್ಲಿ ಈ ಬೈಕ್ ನ ಎಕ್ಸ್ ಶೋರೂಂ ಬೆಲೆ ಸುಮಾರು 5 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಆಸಕ್ತ ಗ್ರಾಹಕರು ಅಧಿಕೃತ ಡೀಲರ್ ಶಿಪ್ ಗಳಿಗೆ ಭೇಟಿ ನೀಡಿ ಬುಕಿಂಗ್ ಮಾಡಬಹುದಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular