ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪುತ್ರಿ ಸೌಮ್ಯಾ ರೆಡ್ಡಿ ಅವರ ಪರ ಪ್ರಚಾರಕ್ಕಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಎಂಟಿಸಿ ಬಸ್ ಗಳನ್ನು ಬಿಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಜನರ ತೆರಿಗೆ ಹಣವನ್ನು ಲೂಟಿ ಮಾಡಿದ ಮೇಲೆ ಇದೀಗ ಪಬ್ಲಿಕ್ ಸರ್ವಿಸ್ ಗೆ ಮೀಸಲಿದ್ದ ಸರ್ಕಾರಿ ಬಸ್ ಗಳನ್ನು ಕೂಡ ಚುನಾವಣೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ನ ಇಷ್ಟೆಲ್ಲ ಅನಾಚಾರಗಳ ವಿರುದ್ಧ ಚುನಾವಣಾ ಆಯೋಗ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಸಾರಿಗೆ ಸಚಿವ @RLR_BTM ಅವರು, ಮಗಳು @Sowmyareddyr ಪ್ರಚಾರಕ್ಕಾಗಿ ಬಿಎಂಟಿಸಿ ಬಸ್ಗಳನ್ನೇ ಬೀದಿಗೆ ಬಿಟ್ಟಿದ್ದಾರೆ.
ಜನರ ತೆರಿಗೆ ಹಣವನ್ನು ಲೂಟಿ ಮಾಡಿದ ಮೇಲೆ ಇದೀಗ ಪಬ್ಲಿಕ್ ಸರ್ವೀಸ್ಗೆ ಮೀಸಲಿದ್ದ ಸರ್ಕಾರಿ ಬಸ್ಗಳನ್ನು ಕೂಡ ಚುನಾವಣೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ನ ಇಷ್ಟೆಲ್ಲಾ ಅನಾಚಾರಗಳ ವಿರುದ್ಧ… pic.twitter.com/TY3jMW3ba3
— BJP Karnataka (@BJP4Karnataka) April 24, 2024

