ನವದೆಹಲಿ: ಬ್ಲೂಮ್ಬರ್ಗ್ ಎಕನಾಮಿ ಫೋರಂ 2026 ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 21ನೇ ಶತಮಾನದಲ್ಲಿ ದೊಡ್ಡ ಬದಲಾವಣೆ ಆಗುತ್ತಿದೆ. ಸಬಲೀಕರಣಕ್ಕೆ ಶಕ್ತಿ ಇರಬೇಕೆನ್ನುವುದು ಭಾರತದ ಚಿಂತನೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಫೋರಂನಲ್ಲಿ ಉದಯೋನ್ಮುಖ ಶಕ್ತಿಗಳ ಥೀಮ್ ಇದೆ. ಇಂದು ತಂತ್ರಜ್ಞಾನ, ಡಾಟಾ, ಜ್ಞಾನ, ನಾವೀನ್ಯತೆಯೇ ಶಕ್ತಿಯಾಗಿದೆ. ತಂತ್ರಜ್ಞಾನವು ಕೆಲವರಿಗೆ ಮಾತ್ರ ನೆರವಾಗುತ್ತಾ? ಅಥವಾ ಲಕ್ಷಾಂತರ ಮಂದಿಯನ್ನು ಸಬಲೀಕರಣಗೊಳಿಸುತ್ತಾ? ಎಂಬುದು ಪ್ರಶ್ನೆ. ಶಕ್ತಿ ಯಾರು ಹೊಂದಿದ್ದಾರೆ ಎಂಬುದಲ್ಲ, ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದು ಮುಖ್ಯ ಎಂದು ಪ್ರಧಾಅನಿ ಮೋದಿ ತಿಳಿಸಿದರು.
ಭಾರತ ಪ್ರಜಾತಂತ್ರದ ತಾಯಿಯಾಗಿದೆ. ಇಲ್ಲಿ ಎಲ್ಲವನ್ನೂ, ಎಲ್ಲರೊಂದಿಗೆ ಚರ್ಚಿಸಿ ನಿರ್ಧರಿಸಲಾಗುತ್ತದೆ. ಸಮಸ್ಯೆಗಳ ಬಗ್ಗೆ ಪ್ರಜಾತಾಂತ್ರಿಕವಾಗಿ ಚರ್ಚಿಸುತ್ತೇವೆ. ಇಲ್ಲಿ ನೂರಕ್ಕೂ ಭಾಷೆಗಳಿವೆ. 80,000 ನೊಂದಾಯಿತ ದಿನಪತ್ರಿಕೆಗಳು, ಮುದ್ರಣ ಸಂಸ್ಥೆಗಳಿವೆ. 500 ಮಿಲಿಯನ್ ಯೂಟ್ಯೂಬ್ ಬಳಕೆದಾರರು, 500 ಮಿಲಿಯನ್ಗೂ ಅಧಿಕ ಇನ್ಸ್ಟಾಗ್ರಾಮ್ ಬಳಕೆದಾರರು ಇದ್ದಾರೆ. ಡಿಜಿಟಲ್ ಪವರ್ನಿಂದಾಗಿ ಜನರು ಪರಸ್ಪರ ಸಂಪರ್ಕಿಸಿ, ಚರ್ಚಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಭಾರತ ವಿಶ್ವಕ್ಕೆ ಅನೇಕ ಕೊಡುಗೆಗಳನ್ನು ನೀಡಿರುವುದನ್ನು ಮೋದಿ ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಪ್ರತಿಯೊಬ್ಬರಿಗೂ ನೆರವಾಗುವ ಇಂಟರ್ನ್ಯಾಷನಲ್ ಸೋಲಾರ್ ಅಲಾಯನ್ಸ್, ಬಿಗ್ ಕ್ಯಾಟ್ ಅಲಾಯನ್ಸ್, ಬಯೋಫೂಯೆಲ್ ಅಲಾಯನ್ಸ್, ಮಿಷನ್ ಲೈಫ್, ಐಮೆಕ್ (ಇಂಡಿಯ-ಮಿಡಲ್ಈಸ್ಟ್-ಯೂರೋಪ್ ಕಾರಿಡಾರ್) ಪ್ಲಾಟ್ಫಾರ್ಮ್ಗಳನ್ನು ಭಾರತ ರೂಪಿಸಿದೆ. ಒಂದು ಸೂರ್ಯ, ಒಂದು ವಿಶ್ವ ಮತ್ತು ಒಂದು ಗ್ರಿಡ್ ಇದು ಭಾರತದ ಆಶಯ. ಒಂದು ಕುಟುಂಬ ಮತ್ತು ಒಂದು ಭವಿಷ್ಯ ಇದು ಭಾರತದ ಗುರಿ. ಜಗತ್ತಿಗೆ ಸಂಪರ್ಕ ಕೊಡುವುದು ಮತ್ತು ಇತರರನ್ನು ಸಬಲೀಕರಣಗೊಳಿಸುವುದು ಭಾರತದ ಆದ್ಯತೆ ಎಂದು ನರೇಂದ್ರ ಮೋದಿ ಈ ಸಂದರ್ಭದಲ್ಲಿ ವಿವರಿಸಿದರು.
ಭಾರತದಲ್ಲಿ ಜ್ಯಾಮ್ ಟ್ರಿನಿಟಿ (ಜನ್ಧನ್-ಆಧಾರ್-ಮೊಬೈಲ್ ಸಂಯೋಗ), ಜಿಎಸ್ಟಿ, ಇನ್ಸಾಲ್ವೆನ್ಸಿ ಇತ್ಯಾದಿ ಹಲವಾರು ರೀತಿಯ ಸುಧಾರಣೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಬ್ಲೂಮ್ಬರ್ಗ್ ನ್ಯೂ ಎಕನಾಮಿ ಫೋರಂ ದೆಹಲಿಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿದೆ. ಅಕ್ಟೋಬರ್ 13ರಿಂದ 15ರವರೆಗೂ ಇರುವ ಇದರಲ್ಲಿ ಮೂರು ದಿನ ಹಲವಾರು ಸೆಷನ್ಗಳಿವೆ. ವಿವಿಧ ವಿಚಾರಗಳ ಮಂಡನೆ, ಚರ್ಚೆ, ಚಿಂತನ ಮಂಥನಗಳು, ಸಂದರ್ಶನಗಳು ನಡೆಯಲಿವೆ.
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧದ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಯಲ್ಲಿ 14 ದೋಷಗಳು; 220 ರೂ ಕೋರ್ಟ್ ಶುಲ್ಕ ಬಾಕಿ: ತಪ್ಪು ಸರಿಪಡಿಸಿ ಅರ್ಜಿ ಸಲ್ಲಿಸುವಂತೆ ಸೂಚನೆ
ನವದೆಹಲಿ: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಮೈತ್ರಿಕೂಟ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಜಂಟಿ ಅರ್ಜಿಯಲ್ಲಿ ಹಲವು ದೋಷಗಳು ಪತ್ತೆಯಾಗಿದ್ದು, ತಾಂತ್ರಿಕ ತೊಡಕು ಎದುರಾಗಿದೆ.
ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಮೈತ್ರಿಕೂಟ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯು ಒಟ್ಟು 14 ತಾಂತ್ರಿಕ ದೋಷಗಳನ್ನು ಪಟ್ಟಿ ಮಾಡಿದ್ದು, ಕೋರ್ಟ್ ಶುಲ್ಕದಲ್ಲಿ 220ರೂ. ಶುಲ್ಕ ಬಾಕಿ ಇರುವುದು ಒಳಗೊಂಡಂತೆ ಹಲವು ಪ್ರಮುಖ ಲೋಪಗಳನ್ನು ಎತ್ತಿ ತೋರಿಸಿದೆ. ಈ ದೋಷಗಳನ್ನು ಸರಿಪಡಿಸಿ ಮರು ಅರ್ಜಿ ಸಲ್ಲಿಸುವವರೆಗೂ ಅರ್ಜಿಯು ನ್ಯಾಯಪೀಠದ ಮುಂದೆ ವಿಚಾರಣೆಗೆ ಪಟ್ಟಿಯಾಗುವುದಿಲ್ಲ ಎಂದು ರಿಜಿಸ್ಟ್ರಿ ಸ್ಪಷ್ಟಪಡಿಸಿದೆ.
ಸಲ್ಲಿಕೆಯಾದ ಅರ್ಜಿಯ ಪುಟಗಳು ಹಾಗೂ ಪ್ರಮಾಣಪತ್ರಗಳಿಗೆ ಅನುಗುಣವಾಗಿ ನ್ಯಾಯಾಲಯದ ಶುಲ್ಕದಲ್ಲಿ 220 ರೂ. ಕಡಿಮೆ ಪಾವತಿಸಲಾಗಿದೆ.
ಖರ್ಗೆ ಗುರುತಿನ ಚೀಟಿ ಅಸ್ಪಷ್ಟ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗುರುತಿನ ಚೀಟಿಯ ಪ್ರತಿ ಕಪ್ಪು-ಬಿಳುಪಾಗಿದ್ದು, ಅಸ್ಪಷ್ಟವಾಗಿದೆ . ಇದಕ್ಕೆ ಸ್ಪಷ್ಟವಾದ ಬಣ್ಣದ ಪ್ರತಿ ಲಗತ್ತಿಸಬೇಕು ಎಂದು ಸೂಚಿಸಲಾಗಿದೆ.
ವಕಾಲತ್ನಾಮಾ ಗೈರು: ಜಂಟಿ ಅರ್ಜಿದಾರರ ಪೈಕಿ 9 ಪ್ರಮುಖ ನಾಯಕರ ಅಧಿಕೃತ ಕಾನೂನು ವಕಾಲತ್ನಾಮಾಗಳು (ವಕೀಲರಿಗೆ ನೀಡುವ ಅಧಿಕಾರ ಪತ್ರ) ಲಗತ್ತಾಗಿಲ್ಲ.
ಫಾಂಟ್ ಮತ್ತು ಪುಟಗಳ ಸಮಸ್ಯೆ: ನ್ಯಾಯಾಲಯದ ನಿಯಮಾವಳಿಗೆ ತಕ್ಕಂತೆ ಸೂಕ್ತ ಅಳತೆಯ ಫಾಂಟ್ ಬಳಸಿಲ್ಲ, ಕೆಲವು ಪುಟಗಳ ಸಂಖ್ಯೆಗಳು ಕ್ರಮಬದ್ಧವಾಗಿಲ್ಲ ಹಾಗೂ ನಿರ್ದಿಷ್ಟ ದಾಖಲೆಗಳ ಬಣ್ಣದ ಪ್ರತಿಗಳು ಕಾಣೆಯಾಗಿವೆ.
ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿರುವ ‘ರಾಹುಲ್ ಗಾಂಧಿ ಮತ್ತು ಇತರರು ವಿರುದ್ಧ ಭಾರತೀಯ ಚುನಾವಣಾ ಆಯೋಗ’ ಅರ್ಜಿಯಲ್ಲಿ ಚುನಾವಣಾ ಆಯೋಗ , ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು, ಪ್ರಮುಖ 10 ಪರಿಹಾರಗಳನ್ನು ಕೋರಲಾಗಿದೆ.
ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಸಂಪೂರ್ಣ ಮೂಲ ದಾಖಲೆಗಳನ್ನು ಸುಪ್ರೀಂ ಕೋರ್ಟ್ಗೆ ಹಾಜರುಪಡಿಸುವುದು.
ಮತದಾರರ ಪಟ್ಟಿ ಪರಿಷ್ಕರಣೆ ಆದೇಶಗಳ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವುದು.
ನಿಷ್ಪಕ್ಷಪಾತ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸ್ವತಂತ್ರ ಸಮಿತಿಯಿಂದ ಸಂಪೂರ್ಣ ಆಡಿಟ್ ನಡೆಸುವುದು.
ಮತ ಕಳ್ಳತನ ಹಾಗೂ ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು.
ಇವಿಎಂ ಮತ್ತು ಎಲೆಕ್ಟ್ರಾನಿಕ್ ಅಂಚೆ ಮತಪತ್ರ ಬದಲಿಗೆ ಪಾರದರ್ಶಕ ಕಾಗದದ ಬ್ಯಾಲೆಟ್ಗಳಿಗೆ ಮರಳುವುದು.
ಅರ್ಜಿದಾರರ ಪಟ್ಟಿ ಹಾಗೂ ಹಿನ್ನೆಲೆ ಪ್ರಮುಖ ಅರ್ಜಿದಾರರು: ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್ (SP), ತೇಜಸ್ವಿ ಯಾದವ್ (RJD), ಸೌಗತ ರಾಯ್ (TMC), ಸುಪ್ರಿಯಾ ಸುಳೆ (NCP), ಸಂಜಯ್ ರಾವತ್ (ಶಿವಸೇನೆ-UBT), ಡಿ. ರಾಜಾ (CPI), ಮಹುವಾ ಮಾಝಿ (JMM), ಎಂ.ಎ. ಬೇಬಿ (CPIM) ಮತ್ತು ಇ.ಟಿ. ಮೊಹಮ್ಮದ್ ಬಷೀರ್ (IUML).
ಸಿಜೆಐ ನಿರಾಕರಣೆ ಬೆನ್ನಲ್ಲೇ ಅರ್ಜಿ: ವಿಪಕ್ಷ ಮುಖಂಡರು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಬಯಸಿದ್ದರು. ಆದರೆ ನ್ಯಾಯಾಂಗ ಶಿಷ್ಟಾಚಾರದ ಪ್ರಕಾರ ಸಿಜೆಐ ಖುದ್ದು ಭೇಟಿಗೆ ನಿರಾಕರಿಸಿ, ನ್ಯಾಯಾಲಯದ ರಿಜಿಸ್ಟ್ರಿಯಲ್ಲೇ ಅರ್ಜಿ ದಾಖಲಿಸಲು ಸೂಚಿಸಿದ್ದರು. ಅದರಂತೆ ಬೃಹತ್ ಮೆರವಣಿಗೆಯ ನಡುವೆ ಅರ್ಜಿ ಸಲ್ಲಿಸಲಾಗಿತ್ತು.
ಕಾನೂನು ತಜ್ಞರ ಪ್ರಕಾರ, ರಿಜಿಸ್ಟ್ರಿ ದೋಷಗಳನ್ನು ಪಟ್ಟಿ ಮಾಡುವುದು ಸಾಮಾನ್ಯ ನ್ಯಾಯಾಂಗ ಪ್ರಕ್ರಿಯೆಯಾಗಿದ್ದು, ವಿಪಕ್ಷಗಳ ಕಾನೂನು ತಂಡವು ಈ ಲೋಪಗಳನ್ನು ಸರಿಪಡಿಸಿ ಮತ್ತೆ ಅರ್ಜಿ ದಾಖಲಿಸಿದ ಬಳಿಕವಷ್ಟೇ ತುರ್ತು ವಿಚಾರಣೆಗೆ ಪೀಠ ನಿಗದಿಯಾಗಲಿದೆ.

