HomeAutoಕಾರಿನ ಗಾಜಿನ ಅಂಚಿನಲ್ಲಿರುವ ಕಪ್ಪು ಚುಕ್ಕೆಗಳು ಕೇವಲ ವಿನ್ಯಾಸವಲ್ಲ: ಇದರ ಹಿಂದಿದೆ ಅಚ್ಚರಿಯ ಸುರಕ್ಷತಾ ರಹಸ್ಯ

ಕಾರಿನ ಗಾಜಿನ ಅಂಚಿನಲ್ಲಿರುವ ಕಪ್ಪು ಚುಕ್ಕೆಗಳು ಕೇವಲ ವಿನ್ಯಾಸವಲ್ಲ: ಇದರ ಹಿಂದಿದೆ ಅಚ್ಚರಿಯ ಸುರಕ್ಷತಾ ರಹಸ್ಯ

ಕಾರಿನ ಮುಂಭಾಗದ ಗ್ಲಾಸ್ ಅಥವಾ ವಿಂಡ್‌ಶೀಲ್ಡ್ ಗಮನಿಸಿದರೆ ಅದರ ಅಂಚುಗಳಲ್ಲಿ ಸಣ್ಣ ಸಣ್ಣ ಕಪ್ಪು ಚುಕ್ಕೆಗಳು ಇರುವುದನ್ನು ನೀವು ನೋಡಿರಬಹುದು. ಅನೇಕರು ಇದನ್ನು ಕೇವಲ ವಿನ್ಯಾಸ ಅಥವಾ ಗಾಜಿನ ಅಂದ ಹೆಚ್ಚಿಸಲು ಮಾಡಿರುವ ಅಲಂಕಾರ ಎಂದು ಭಾವಿಸುತ್ತಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರು ಹಂಚಿಕೊಂಡ ಕಥೆಯು ಈ ಚುಕ್ಕೆಗಳ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಆಕೆ ಹಂಚಿಕೊಂಡ ಅನುಭವಕ್ಕೂ ಈ ಚುಕ್ಕೆಗಳಿಗೂ ಇರುವ ಸಂಬಂಧ ನಿಜಕ್ಕೂ ಕುತೂಹಲಕಾರಿಯಾಗಿದೆ.

ಸದರಿ ಮಹಿಳೆ ತನ್ನ ಪೋಸ್ಟ್‌ನಲ್ಲಿ ಅತಿಯಾದ ಬಿಸಿಲಿನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದ ಅಪಘಾತದ ಬಗ್ಗೆ ಉಲ್ಲೇಖಿಸಿದ್ದಾರೆ. ರಸ್ತೆಯಲ್ಲಿ ಚಲಿಸುತ್ತಿದ್ದಾಗ ಲಾರಿಯ ಟೈರ್ ತುಣುಕೊಂದು ವೇಗವಾಗಿ ಬಂದು ಕಾರಿನ ವಿಂಡ್‌ಶೀಲ್ಡ್‌ಗೆ ಬಡಿದಿತ್ತು. ಗಾಜು ಸಂಪೂರ್ಣವಾಗಿ ಬಿರುಕು ಬಿಟ್ಟರೂ ಸಹ ಪುಡಿಯಾಗಿ ಒಳಗಿದ್ದವರ ಮೇಲೆ ಬೀಳಲಿಲ್ಲ. ಇದಕ್ಕೆ ಕಾರಿನ ಅಂಚಿನಲ್ಲಿರುವ ಆ ಕಪ್ಪು ಚುಕ್ಕೆಗಳೇ ಕಾರಣ ಎಂದು ಅವರು ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಜನರು ಇದು ಕಾಲ್ಪನಿಕ ಕಥೆ ಎಂದು ಟೀಕಿಸಿದರೂ ತಾಂತ್ರಿಕವಾಗಿ ಈ ಚುಕ್ಕೆಗಳ ಮಹತ್ವವೇ ಬೇರೆಯಿದೆ.

ಏನಿದು ಫ್ರಿಟ್ ಬ್ಯಾಂಡ್ ಮತ್ತು ಕಪ್ಪು ಚುಕ್ಕೆಗಳು?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಂತ್ರಿಕ ಭಾಷೆಯಲ್ಲಿ ಈ ಕಪ್ಪು ಪಟ್ಟಿಯನ್ನು ಫ್ರಿಟ್ ಎಂದು ಕರೆಯಲಾಗುತ್ತದೆ. ಇದು ಕೇವಲ ಬಣ್ಣವಲ್ಲ ಬದಲಾಗಿ ಗಾಜಿನ ತಯಾರಿಕೆಯಲ್ಲೇ ಬಳಸುವ ಒಂದು ರೀತಿಯ ಸೆರಾಮಿಕ್ ಮಿಶ್ರಣವಾಗಿದೆ. ಇದರ ಮುಖ್ಯ ಕೆಲಸವೆಂದರೆ ವಿಂಡ್‌ಶೀಲ್ಡ್ ಅನ್ನು ಕಾರಿನ ಬಾಡಿಗೆ ಗಟ್ಟಿಯಾಗಿ ಅಂಟಿಸಿ ಹಿಡಿಯುವುದು. ಗಾಜನ್ನು ಫ್ರೇಮ್‌ಗೆ ಅಂಟಿಸಲು ಬಳಸುವ ಅಂಟು ಅಥವಾ ಗಮ್ ಸೂರ್ಯನ ಅತಿಯಾದ ನೇರ ಕಿರಣಗಳಿಂದ ಹಾಳಾಗದಂತೆ ಈ ಕಪ್ಪು ಪಟ್ಟಿ ರಕ್ಷಣೆ ನೀಡುತ್ತದೆ.

ಇನ್ನು ಚುಕ್ಕೆಗಳ ವಿಚಾರಕ್ಕೆ ಬರುವುದಾದರೆ ಇವು ಗಾಜಿನ ಉಷ್ಣತೆಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ. ಗಾಜಿನ ಕಪ್ಪು ಭಾಗವು ಬಿಸಿಲಿಗೆ ಬೇಗನೆ ಕಾಯುತ್ತದೆ ಮತ್ತು ಪಾರದರ್ಶಕ ಭಾಗ ತಡವಾಗಿ ಕಾಯುತ್ತದೆ. ಈ ವ್ಯತ್ಯಾಸದಿಂದಾಗಿ ಗಾಜು ಬಿರುಕು ಬಿಡುವ ಸಾಧ್ಯತೆ ಇರುತ್ತದೆ. ಆದರೆ ಈ ಚುಕ್ಕೆಗಳು ಶಾಖವನ್ನು ಹಂತಹಂತವಾಗಿ ಹರಡುವ ಮೂಲಕ ಗಾಜಿನ ಸುರಕ್ಷತೆಯನ್ನು ಕಾಪಾಡುತ್ತವೆ.

ಹೀಗಾಗಿ ರಸ್ತೆಯಲ್ಲಿ ವೇಗವಾಗಿ ಚಲಿಸುವಾಗ ಅಥವಾ ಅನಿವಾರ್ಯ ಕಾರಣಗಳಿಂದ ಗಾಜು ಬಿರುಕು ಬಿಟ್ಟಾಗ ಅದು ಸಂಪೂರ್ಣವಾಗಿ ಕುಸಿದು ಬೀಳದಂತೆ ತಡೆಯಲು ಈ ವ್ಯವಸ್ಥೆ ಪೂರಕವಾಗಿ ಕೆಲಸ ಮಾಡುತ್ತದೆ. ಮಹಿಳೆಯ ಕಥೆ ಕೇವಲ ಸೃಜನಶೀಲ ಬರವಣಿಗೆಯಾಗಿದ್ದರೂ ವಿಂಡ್‌ಶೀಲ್ಡ್ ಮೇಲಿನ ಆ ಚುಕ್ಕೆಗಳು ಮಾತ್ರ ವಾಹನದ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಸತ್ಯ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular