ಚಳಿಗಾಲದಲ್ಲಿ ತಪ್ಪದೇ ತಿನ್ನಿ ಕಪ್ಪು ಕ್ಯಾರೆಟ್; ಇದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಚಳಿಗಾಲ ಶುರು ಆಗ್ತಿದ್ದಂತೆ ಮಾರುಕಟ್ಟೆಯಲ್ಲಿ ನೀವು ಕ್ಯಾರೆಟ್‌ ನೋಡ್ಬಹುದು. ಕ್ಯಾರೆಟ್‌ ಎಲ್ಲ ಋತುವಿನಲ್ಲಿ ಸಿಗುತ್ತದೆಯಾದ್ರೂ ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಕ್ಯಾರೆಟ್‌ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಕ್ಯಾರೆಟ್‌ ಎಂದ ತಕ್ಷಣ ನಾವು ಕೆಂಪು ಹಾಗೂ ಕೇಸರಿ ಕ್ಯಾರೆಟ್‌ ನೆನಪು ಮಾಡಿಕೊಳ್ತೇವೆ. ಆದ್ರೆ ಕಪ್ಪು ಬಣ್ಣದ ಕ್ಯಾರೆಟ್‌ ಕೂಡ ಇರುತ್ತೆ ಅನ್ನೋದು ನಿಮಗೆ ಗೊತ್ತಾ ? ಇದ್ರ ಬಣ್ಣ ಬದನೆಕಾಯಿ ಬಣ್ಣದಲ್ಲಿದ್ದರೂ ನೋಡಲು ಕಪ್ಪಾಗಿ ಕಾಣಿಸುತ್ತದೆ. ಕೆಂಪು ಹಾಗೂ ಕೇಸರಿ ಬಣ್ಣದ ಕ್ಯಾರೆಟ್‌ ಗಿಂತ ಇದು ಹೆಚ್ಚು ಆರೋಗ್ಯಕ್ಕೆ ಒಳ್ಳೆಯದು ಎಂದು ನಂಬಲಾಗಿದೆ.

ಆಂಟಿ ಆಕ್ಸಿಡೆಂಟ್‌ ಹೆಚ್ಚಿರುವ ಈ ಕಪ್ಪು ಕ್ಯಾರೆಟ್‌ ಫೈಬರ್‌, ವಿಟಮಿನ್‌ ಎ, ವಿಟಮಿನ್‌ ಬಿ, ವಿಟಮಿನ್‌ ಸಿ, ಮ್ಯಾಂಗನೀಸ್‌ ಸೇರಿದಂತೆ ಅನೇಕ ಪೋಷಕಾಂಶಗಳಿಂದ ಕೂಡಿರುತ್ತದೆ. ಬೊಜ್ಜು, ಮಧುಮೇಹ, ಹೃದ್ರೋಗ, ಕ್ಯಾನ್ಸರ್‌ ಸೇರಿದಂತೆ ಅನೇಕ ಗಂಭೀರ ಖಾಯಿಲೆಗಳಿಗೆ ಇದು ಪರಿಹಾರ ನೀಡುತ್ತದೆ.

ಕಪ್ಪು ಕ್ಯಾರೆಟ್‌ ಸೇವನೆ ಮಾಡೋದ್ರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಸದಾ ನಿಯಂತ್ರಣದಲ್ಲಿರುತ್ತದೆ. ಮಧುಮೇಹಿಗಳು ಕಪ್ಪು ಕ್ಯಾರೆಟನ್ನು ನಿಯಮಿತವಾಗಿ ಸೇವನೆ ಮಾಡೋದು ಒಳ್ಳೆಯದು.

ಕ್ಯಾಲೋರಿ ಕಡಿಮೆ ಇರುವ ಆದ್ರೆ ಹೆಚ್ಚು ಪೌಷ್ಠಿಕಾಂಶ ಹೊಂದಿರುವ ಕಪ್ಪು ಕ್ಯಾರೆಟ್‌ ಸೇವನೆ ಮಾಡೋದ್ರಿಂದ ನಿಮ್ಮ ತೂಕವನ್ನು ನೀವು ನಿಯಂತ್ರಣದಲ್ಲಿ ಇಡಬಹುದು. ಹೃದ್ರೋಗಿಗಳು ಕೂಡ ಈ ಕಪ್ಪು ಕ್ಯಾರೆಟನ್ನು ಚಳಿಗಾಲದಲ್ಲಿ ಸೇವನೆ ಮಾಡಬಹುದು. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಅನೇಕ ರೋಗದಿಂದ ನಿಮ್ಮನ್ನು ದೂರವಿಡುವ ಶಕ್ತಿ ಈ ಕ್ಯಾರೆಟ್‌ ಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read