
ಮಂಗಳೂರು ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದ್ದು, ಸುಧೀರ್ ಶೆಟ್ಟಿ ಮೇಯರ್ ಆಗಿ ಆಯ್ಕೆ ಆಗಿದ್ದಾರೆ. ಉಪಮೇಯರ್ ಆಗಿ ಪಣಂಬೂರು ವಾರ್ಡ್ ನ ಸುನೀತಾ ಆಯ್ಕೆ ಆಗಿದ್ದಾರೆ.
ಸುಧೀರ್ ಶೆಟ್ಟಿ 4 ನೇ ಬಾರಿಗೆ ಮೇಯರ್ ಆಗಿ ಆಯ್ಕೆ ಆಗಿದ್ದು, ಮುಖ್ಯ ಸಚೇತಕರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ 44 , ಕಾಂಗ್ರೆಸ್ 14, ಎಸ್ ಡಿ ಪಿಐ 2 ಸ್ಥಾನ ಪಡೆದಿದೆ.

