HomeKarnatakaBIG NEWS: ನಮ್ಮ ಪಕ್ಷದಲ್ಲಿಯೂ ಅಸಮಾಧಾನ, ಬೇಸರವಿರೋದು ಸತ್ಯ; ಸ್ವಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸಿದ ಮಾಜಿ...

BIG NEWS: ನಮ್ಮ ಪಕ್ಷದಲ್ಲಿಯೂ ಅಸಮಾಧಾನ, ಬೇಸರವಿರೋದು ಸತ್ಯ; ಸ್ವಪಕ್ಷದ ವಿರುದ್ಧ ಬೇಸರ ವ್ಯಕ್ತಪಡಿಸಿದ ಮಾಜಿ ಶಾಸಕ ರಾಜುಗೌಡ

ಬೆಂಗಳೂರು: ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ, ಆದರೆ ನಮ್ಮ ಪಕ್ಷದಲ್ಲಿಯೂ ಅಸಮಾಧಾನ ಬೇಸರವಿರುವುದು ಸತ್ಯ ಎಂದು ಮಾಜಿ ಶಾಸಕ ರಾಜು ಗೌಡ ಪಕ್ಷದಲ್ಲಿನ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಜು ಗೌಡ, ನಟ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ವಿಚಾರವಾಗಿ ಸ್ಪಷ್ಟನೆ ನೀಡುತ್ತಾ, ನಾನು ಯಾವುದೇ ಆಪರೇಷನ್ ಹಸ್ತಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ. ಡಿ.ಕೆ.ಶಿವಕುಮಾರ್ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೆನ್ನಾಗಿ ಕೆಲಸ ಮಾಡಿದ್ದೆ. ಆದರೂ ಹೇಗೆ ಸೋತೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ನಿಮ್ಮ ಹಾಗೂ ಸಿಎಂ ಸಿದ್ದರಾಮಯ್ಯನವರ ಪ್ರಭಾವ ಎಂದು ಹೇಳಿದೆ ಎಂದಿದ್ದಾರೆ.

ಇನ್ನು ನಮ್ಮ ಪಕ್ಷದಲ್ಲಿಯೂ ಅಸಮಾಧಾನ ಇದೆ. ಸಭೆಯಲ್ಲಿ ಚರ್ಚೆ ವೇಳೆ ವಿಪಕ್ಷ ನಾಯಕನ ಆಯ್ಕೆ ಮಾಡಿ ಎಂದು ಹೇಳಿದ್ದೇವೆ. ಪಕ್ಷದ ವೇದಿಕೆಯಲ್ಲಿ ನಾನು ಎಲ್ಲಾ ವಿಚಾರಗಳನ್ನು ಮಾತನಾಡಿದ್ದೇನೆ. 17 ಜನ ಶಾಸಕರನ್ನು ಬಾಂಬೆ ಟೀಂ ಅನ್ನೋದು ತಪ್ಪು. ಅವರು ಬಂದ ಮೇಲೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular