HomeEntertainmentರಣಬೀರ್-ಯಶ್ ಕಾಂಬೋಗೆ ಫುಲ್ ಮಾರ್ಕ್ಸ್: ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯಲಿದೆಯಾ 'ರಾಮಾಯಣ'?

ರಣಬೀರ್-ಯಶ್ ಕಾಂಬೋಗೆ ಫುಲ್ ಮಾರ್ಕ್ಸ್: ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯಲಿದೆಯಾ ‘ರಾಮಾಯಣ’?

ರ‍ಣಬೀರ್ ಕಪೂರ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಮೊದಲ ಪ್ರಮುಖ ವಿಮರ್ಶೆ ಹೊರಬಿದ್ದಿದ್ದು, ಚಿತ್ರರಂಗದ ಪ್ರಸಿದ್ಧ ವಿಮರ್ಶಕ ತರನ್ ಆದರ್ಶ್ ಈ ಸಿನಿಮಾಗೆ 5-ಸ್ಟಾರ್ ರೇಟಿಂಗ್ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಚಿತ್ರವನ್ನು ಅತ್ಯಂತ ಭವ್ಯ ಹಾಗೂ ಅದ್ಭುತ ಎಂದು ಬಣ್ಣಿಸಿರುವ ಅವರು ಪ್ರೇಕ್ಷಕರಲ್ಲಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ತಮ್ಮ ವಿಮರ್ಶೆಯಲ್ಲಿ ಬರೆದುಕೊಂಡಿರುವ ತರನ್ ಆದರ್ಶ್, “ನಿರ್ದೇಶಕ ನಿತೀಶ್ ತಿವಾರಿ ಅವರು ಭಾರತೀಯ ಸಂಸ್ಕೃತಿಯ ಹಿರಿಮೆ ಮತ್ತು ಅಧರ್ಮದ ಮೇಲೆ ಧರ್ಮದ ಜಯವನ್ನು ಸಾರುವ ಅತ್ಯುತ್ತಮ ದೃಶ್ಯ ಕಾವ್ಯವನ್ನು ನೀಡಿದ್ದಾರೆ. ಚಿತ್ರಕಥೆ ಹಾಗೂ ನಿರೂಪಣೆ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಕೇವಲ ಅದ್ಭುತ ದೃಶ್ಯಾವಳಿಗಳು ಅಥವಾ ಬೃಹತ್ ನಿರ್ಮಾಣ ಮಾತ್ರವಲ್ಲದೆ, ಚಿತ್ರದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಜೀವಕೋಶ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಇದೇ ಅಂಶ ರಾಮಾಯಣ ಚಿತ್ರವನ್ನು ವಿಶೇಷವಾಗಿಸಿದೆ” ಎಂದು ಹೊಗಳಿದ್ದಾರೆ.

ದೊಡ್ಡ ಮಟ್ಟದ ಮೇಕಿಂಗ್ ಜೊತೆಗೆ ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಪ್ಲಸ್ ಪಾಯಿಂಟ್ ಎಂಬುದನ್ನು ಈ ವಿಮರ್ಶೆ ಎತ್ತಿಹಿಡಿದಿದೆ. ಆದರೆ ಕೆಲವು ಇಂಗ್ಲಿಷ್ ವಿಮರ್ಶಕರು ಭಾವನಾತ್ಮಕ ಸನ್ನಿವೇಶಗಳು ಇನ್ನು ಕೊಂಚ ಉತ್ತಮವಾಗಿರಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಇಂಗ್ಲಿಷ್ ಆವೃತ್ತಿಯು ಮೂಲ ಆವೃತ್ತಿಗಿಂತ 30 ನಿಮಿಷಗಳಷ್ಟು ಕಡಿಮೆಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತರನ್ ಆದರ್ಶ್ ಅವರಿಗೆ ಕನೆಕ್ಟ್ ಆದಂತೆ ಸಾರ್ವಜನಿಕರಿಗೂ ಈ ಭಾವನಾತ್ಮಕ ಸನ್ನಿವೇಶಗಳು ಇಷ್ಟವಾದರೆ, ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ಸಂಶಯವಿಲ್ಲ. ಸದ್ಯ ಪ್ರೇಕ್ಷಕರ ತೀರ್ಪಿನ ಮೇಲೆ ಚಿತ್ರದ ಭವಿಷ್ಯ ಆಧಾರಿತವಾಗಿದೆ. ನಟ ಯಶ್ ಹಾಗೂ ಸಾಯಿ ಪಲ್ಲವಿ ಈ ಬಿಗ್ ಬಜೆಟ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular