HomeKarnatakaBIG NEWS: ಬರ ಅಧ್ಯಯನದ ವೇಳೆ ಕೈಕೈ ಮಿಲಾಯಿಸಿಕೊಂಡ ಬಿಜೆಪಿ ನಾಯಕರು

BIG NEWS: ಬರ ಅಧ್ಯಯನದ ವೇಳೆ ಕೈಕೈ ಮಿಲಾಯಿಸಿಕೊಂಡ ಬಿಜೆಪಿ ನಾಯಕರು

ರಾಮನಗರ: ರಾಜ್ಯಾದ್ಯಂತ ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಬರ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ ಬರ ಅಧ್ಯಯನಕ್ಕೆಂದು ಆಗಮಿಸಿದ್ದ ಬಿಜೆಪಿ ನಾಯಕರ ನಡುವೆಯೇ ಗಲಾಟೆ ನಡೆದು ಕೈಕೈ ಮಿಲಾಯಿಸಿಕೊಂಡಿರುವ ಘಟನೆ ನಡೆದಿದೆ.

ರಾಮನಗರ ಜಿಲ್ಲೆಯ ವಿಭೂತಿಕೆರೆ ಗ್ರಾಮಕ್ಕೆ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ನೇತೃತ್ವದ ತಂಡ ಬರ ಅಧ್ಯಯನಕ್ಕೆ ಭೇಟಿ ನೀಡಿದೆ. ಬರ ಅಧ್ಯಯನಕ್ಕೆಂದು ಬಂದವರು ರೈತರ ಸಂಕಷ್ಟ ಆಲಿಸುವುದು ಬಿಟ್ಟು ಗಲಾಟೆ ಮಾಡಿಕೊಂಡಿದ್ದಾರೆ. ಎಂಎಲ್ ಸಿ ಆ.ದೇವೇಗೌಡ, ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಜಯರಾಂ ನಡುವೆ ವೈಯಕ್ತಿಕ ಕಾರಣಕ್ಕಾಗಿ ಮಾತಿಗೆ ಮಾತು ಆರಂಭವಾಗಿ, ವಾಗ್ವಾದ ವಿಕೋಪಕ್ಕೆ ತಿರುಗಿದೆ. ಇಬ್ಬರು ನಾಯಕರು ಕೈಕೈ ಮಿಲಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಎದುರೇ ಈ ಗಲಾಟೆ ನಡೆದಿದೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಪೊಲೀಸರು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಜಗಳ ಬಿಡಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular