HomeKarnataka10 ಕೆ.ಜಿ ಅಕ್ಕಿನೂ ಇಲ್ಲ, ದುಡ್ಡೂ ಇಲ್ಲ; ಕಿವಿಯ ಮೇಲೆ ಹೂವಿಟ್ಟಿದ್ದ ಸಿಎಂ ಸಿದ್ದರಾಮಯ್ಯಈಗ ಜನರ...

10 ಕೆ.ಜಿ ಅಕ್ಕಿನೂ ಇಲ್ಲ, ದುಡ್ಡೂ ಇಲ್ಲ; ಕಿವಿಯ ಮೇಲೆ ಹೂವಿಟ್ಟಿದ್ದ ಸಿಎಂ ಸಿದ್ದರಾಮಯ್ಯಈಗ ಜನರ ತಲೆ ಮೇಲೆ ಹೂವಿನ ಕುಂಡವನ್ನೇ ಇಟ್ಟಿದ್ದಾರೆ; ಬಿಜೆಪಿ ವಾಗ್ದಾಳಿ

ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಖಚಿತ-ನಿಶ್ಚಿತ-ಖಂಡಿತವೆಂದ ತಕ್ಷಣ ಸರ್ಕಾರದ ಗ್ಯಾರಂಟಿಗಳಿಗೆ ಸಂಚಕಾರ ಲಭಿಸಿದೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ರಾಜ್ಯದ ಜನತೆಗೆ 10 ಕೆಜಿ ಅಕ್ಕಿ ಬೇಕೋ ಬೇಡ್ವೋ ಎಂದು ಕಿವಿಯ ಮೇಲೆ ಹೂವಿಟ್ಟಿದ್ದ ಸಿಎಂ ಸಿದ್ದರಾಮಯ್ಯ, ಈಗ ಜನತೆಯ ತಲೆ ಮೇಲೆ ಹೂವಿನ ಕುಂಡವನ್ನೇ ಇಟ್ಟಿದ್ದಾರೆ.
10 ಕೆಜಿ ಅಕ್ಕಿಯೂ ಇಲ್ಲ, ಅಕ್ಕಿಯ ಬದಲು ದುಡ್ಡು ಇಲ್ಲ, ಇದೊಂದು ರೀತಿ ಉಂಡು ಹೋದ ಕೊಂಡು ಹೋದದ ಅಪರಾವತಾರ ಎಂದು ಆಕ್ರೋಶ ವ್ಯಲ್ತಪಡಿಸಿದೆ.

ಸಿಎಂ ಸಿದ್ದರಾಮಯ್ಯ ಅವರೇ, 3 ತಿಂಗಳಿನಿಂದ ಅಕ್ಕಿ ದುಡ್ಡು ಬಂದಿಲ್ಲ, ದುಡ್ಡು ಕೊಡ್ತಿರೋ ಇಲ್ವೋ ಅನ್ನೊದನ್ನ ಹೇಳ್ಬಿಡಿ ಎಂದು ಟ್ವೀಟ್ ಮೂಲಕ ಬಿಜೀಪಿ ಆಗ್ರಹಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular