HomeKarnatakaBIG NEWS: ಬಗೆದಷ್ಟು ಬಯಲಾಗುತ್ತಿದೆ ಸಚಿವ ನಾಗೇಂದ್ರ ಬ್ರಹ್ಮಾಂಡ ಭ್ರಷ್ಟಾಚಾರ; ರಾಜೀನಾಮೆ ಯವಾಗ? ಬಿಜೆಪಿ ಪ್ರಶ್ನೆ

BIG NEWS: ಬಗೆದಷ್ಟು ಬಯಲಾಗುತ್ತಿದೆ ಸಚಿವ ನಾಗೇಂದ್ರ ಬ್ರಹ್ಮಾಂಡ ಭ್ರಷ್ಟಾಚಾರ; ರಾಜೀನಾಮೆ ಯವಾಗ? ಬಿಜೆಪಿ ಪ್ರಶ್ನೆ

ಬೆಂಗಳೂರು: ಬಗೆದಷ್ಟು ಬಯಲಾಗ್ತಿದೆ ಸಚಿವ ಬಿ. ನಾಗೇಂದ್ರನ ಬ್ರಹ್ಮಾಂಡ ಭ್ರಷ್ಟಾಚಾರ. ದಲಿತರ ಹಣ, ಕಾಂಗ್ರೆಸ್ ಜಾತ್ರೆ ಎಂದು ರಾಜ್ಯ ಬಿಜೆಪಿ ಘಟಕ ಆಕ್ರೋಶ ವ್ಯಕ್ತಪಡಿಸಿದೆ.

ವಾಲ್ಮೀಕಿ ನಿಗಮದ ಹಣ ನುಂಗುವುದಕ್ಕೆ ಯುದ್ಧೋಪಾದಿಯಲ್ಲಿ ಕೆಲಸ ಮಾಡಿದೆ ಕಾಂಗ್ರೆಸ್ ಸರ್ಕಾರ. ಸಿಎಂ ಸಿದ್ದರಾಮಯ್ಯ ಅವರೇ ಕಳಂಕಿತ ಸಚಿವ ನಾಗೇಂದ್ರನ ರಾಜೀನಾಮೆ ಪಡೆಯದೆ ಮೌನವಾಗಿದ್ಯಾಕೆ? ನಿಮಗೂ ಪಾಲು ತಲುಪಿದೆಯಾ? ತನಿಖೆ ಸಿಬಿಐಗೆ ವಹಿಸಲು ಹಿಂಜರಿಕೆ ಏಕೆ? ಎಂದು ಪ್ರಶ್ನಿಸಿದೆ.

ನಕಲಿ, ಬೇನಾಮಿ ಖಾತೆ ಸೃಷ್ಟಿಸುವುದರಲ್ಲಿ ಕಾಂಗ್ರೆಸ್ ಸರ್ಕಾರದ್ದು ಎತ್ತಿದ ಕೈ. ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ ಹಣ ವರ್ಗಾವಣೆಯಾದ ಖಾತೆಗಳು ಯಾರಿಗೆ ಸೇರಿದ್ದು? ಉತ್ತರಿಸುವಿರಾ ಸಿದ್ದರಾಮಯ್ಯನವರೇ? ಎಂದು ಸರಣಿ ಟ್ವೀಟ್ ಮೂಲಕ ಕೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular