HomeLatest Newsಅಚ್ಚರಿಯಾಗಬೇಡಿ ಇದು ಬಿಹಾರದ ರಾಜಧಾನಿ ಪಾಟ್ನಾ, ಹೇಗಿದೆ ನಮ್ಮ ಸಾಧನೆ ಎಂದು ವಿಡಿಯೊ ಹರಿಬಿಟ್ಟ ಬಿಜೆಪಿ:...

ಅಚ್ಚರಿಯಾಗಬೇಡಿ ಇದು ಬಿಹಾರದ ರಾಜಧಾನಿ ಪಾಟ್ನಾ, ಹೇಗಿದೆ ನಮ್ಮ ಸಾಧನೆ ಎಂದು ವಿಡಿಯೊ ಹರಿಬಿಟ್ಟ ಬಿಜೆಪಿ: ಸೇತುವೆಯಿಂದ ಹಾರಿಹೋದ ಬೈಕ್ ಸವಾರ; ವಿಡಿಯೊ

ಜಿಯೊ ಆಗಮನವಾದ ಬಳಿಕ ಭಾರತದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲ ವಿಭಾಗಗಳೂ ಸಹ ತಮ್ಮ ಅಧಿಕೃತ ಖಾತೆಗಳನ್ನು ಬಲಿಷ್ಠಪಡಿಸಿಕೊಳ್ಳತೊಡಗಿದವು. ಈ ಪೈಕಿ ರಾಜಕೀಯ ಕ್ಷೇತ್ರದಲ್ಲಿ ವೇಗವಾಗಿ ಪ್ರಭಾವ ಬೀರಲು ಆರಂಭಿಸಿದ್ದು ಬಿಜೆಪಿ.

ಹೌದು, ಭಾರತದಲ್ಲಿ ಅಂತರ್ಜಾಲವನ್ನು ಉಪಯೋಗಿಸಿಕೊಂಡು ಬಿಜೆಪಿ ಪಡೆದುಕೊಂಡಷ್ಟು ಪ್ರಚಾರವನ್ನು ಯಾವ ಪಕ್ಷವೂ ಪಡೆದುಕೊಳ್ಳಲಿಲ್ಲ. ಅದರಲ್ಲೂ ಮೋದಿ ವೈರಲ್ ಆಗಿ ಖ್ಯಾತಿ ಪಡೆಯಲು ಸಹ ಇದೇ ಮಾರ್ಗ ಕಾರಣ.

ಇತ್ತೀಚೆಗಿನ ದಿನಗಳಲ್ಲಿ ಟ್ರೋಲ್ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿರುವ ಮೋದಿ 4ಜಿ ಯುಗ ಆರಂಭವಾದಾಗ ಸಾಮಾಜಿಕ ಜಾಲತಾಣದಲ್ಲಿ ಹೀರೊ ಆಗಿದ್ದರು. ಹೀಗೆ ಆಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಹಿಡಿತ ಸಾಧಿಸುತ್ತಾ ಬಂದಿರುವ ಬಿಜೆಪಿ ಇತ್ತೀಚಿನ ದಿನಗಳಲ್ಲಿ ತನ್ನ ಎಡವಟ್ಟುಗಳಿಂದ ಭಾರೀ ಟೀಕೆಗಳನ್ನೂ ಎದುರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದೇ ಸಾಲಿಗೆ ಇದೀಗ ಬಿಜೆಪಿ ಬಿಹಾರದ ರಾಜಧಾನಿ ಪಾಟ್ನಾ ಕುರಿತು ಹಂಚಿಕೊಂಡಿರುವ ವಿಡಿಯೊ ಸೇರ್ಪಡೆಗೊಂಡಿದೆ. ಈ ವಿಡಿಯೊದಲ್ಲಿ ಚಂದದ ರಸ್ತೆ, ಅಕ್ಕಪಕ್ಕದಲ್ಲಿ ಸುಂದರ ಲೈಟಿಂಗ್‌ವುಳ್ಳ ರಸ್ತೆ ತಡೆಗೋಡೆಗಳು ಮಿಂಚುತ್ತಿವೆ. ಇಂತಹ ಸುಸಜ್ಜಿತ ರಸ್ತೆಯಲ್ಲಿ ಕಾರು ಹಾಗೂ ಬೈಕ್‌ಗಳು ಒಂದು ಚೂರು ಅಲುಗಾಡದೇ ಸರಾಗವಾಗಿ ಸಾಗುತ್ತಿವೆ.

ಇಂತಹ ವಿಡಿಯೊ ಹಂಚಿಕೊಂಡ ಬಿಜೆಪಿ ‘ಅಚ್ಚರಿಯಾಗಬೇಡಿ, ಇದು ಪಾಟ್ನಾ, ಬಿಹಾರದ ರಾಜಧಾನಿ. ಎಲ್ಲಿ ಬಿಜೆಪಿ – ಎನ್‌ಡಿಎ ಸರ್ಕಾರ ಅಧಿಕಾರದಲ್ಲಿರುತ್ತೋ ಅಲ್ಲಿ ವೇಗದ ಬೆಳವಣಿಗೆ ಇರಲಿದೆ’ ಎಂದು ಬರೆದುಕೊಂಡಿದೆ.

ಆದರೆ ಅಸಲಿಯತ್ತಿಗೆ ಇದು ನಿಜವಾದ ವಿಡಿಯೊವಲ್ಲ, ಬದಲಿಗೆ ಎಐನಲ್ಲಿ ರಚಿಸಲಾದ ನಕಲಿ ವಿಡಿಯೊ. ಆದರೆ ಬಿಜೆಪಿ ಎಲ್ಲಿಯೂ ಇದು ಎಐ ಎಂದು ಉಲ್ಲೇಖಿಸಿಲ್ಲ ಹಾಗೂ ಇದು ಮುಂದಿನ ಯೋಜನೆಯಾ ಎಂಬುದನ್ನೂ ಸಹ ಬರೆದುಕೊಂಡಿಲ್ಲ. ಬದಲಾಗಿ ಈಗಾಗಲೇ ಬಿಹಾರ ಹೀಗಿದೆ ಎಂದು ಬರೆದುಕೊಂಡು ನಕಲಿ ವಿಡಿಯೊ ಹಾಕಿಕೊಂಡಿದೆ.

ಇನ್ನು ಈ ವಿಡಿಯೊದಲ್ಲಿ ಫ್ಲೈಓವರ್‌ ಮೇಲೆ ಸಾಗುತ್ತಿದ್ದ ಮೂರ್ನಾಲ್ಕು ಬೈಕ್‌ಗಳ ಪೈಕಿ ಒಂದು ಬೈಕ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಎಐ ಎಂಬುದು ಇದರಿಂದ ಸಾಮಾನ್ಯ ಜನರಿಗೂ ಅರ್ಥವಾಗಿಹೋಗಿದೆ. ಈ ಅಂಶವನ್ನು ಉಲ್ಲೇಖಿಸಿ ನೆಟ್ಟಿಗರು ಈ ರೀತಿ ನಕಲಿ ವಿಡಿಯೊ ಹಾಕಿ ಜನರ ಕಣ್ಣಿಗೆ ಮಣ್ಣು ಎರೆಚುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular