HomeKarnatakaBIG NEWS: ಏಕಾಏಕಿ ಕೆಟ್ಟುನಿಂತ ಲಿಫ್ಟ್; ಒಳಗೆ ಸಿಲುಕಿಕೊಂಡ ಬಿಜೆಪಿ ಸಂಸದನ ಪರದಾಟ

BIG NEWS: ಏಕಾಏಕಿ ಕೆಟ್ಟುನಿಂತ ಲಿಫ್ಟ್; ಒಳಗೆ ಸಿಲುಕಿಕೊಂಡ ಬಿಜೆಪಿ ಸಂಸದನ ಪರದಾಟ

ಬೆಂಗಳೂರು: ಬಿಜೆಪಿ ಸಂಸದ ಉಮೇಶ್ ಜಾದವ್ ಲಿಫ್ಟ್ ಒಳಗೆ ಸಿಲುಕಿ ಪರದಾಡಿದ ಘಟನೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದಿದೆ.

ಸಂಸದ ಉಮೇಶ್ ಜಾದವ್ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಸಂಸದರು ಹಾಗೂ ಇನ್ನೂ ಇಬ್ಬರು ಲಿಫ್ಟ್ ಹತ್ತಿದ ಕೆಲ ಕ್ಷಣದಲ್ಲೇ ಕರೆಂಟ್ ಹೋಗಿ ಲಿಫ್ಟ್ ಮಧ್ಯದಲ್ಲೇ ಕೈಕೊಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೂವರು ಲಿಫ್ಟ್ ನಲ್ಲೇ ಅರ್ಧಗಂಟೆಗೂ ಹೆಚ್ಚು ಕಾಲ ಪರದಾಡಿದ್ದಾರೆ. ಬಳಿಕ ನೆಲಮಹಡಿಯಲ್ಲಿ ಅರ್ಧದಲ್ಲಿ ಲಿಫ್ಟ್ ಬಾಗಿಲು ತೆರೆದುಕೊಂಡಿದೆ. ಕಷ್ಟಪಟ್ಟು ಸಂಸದ ಜಾದವ್ ಲಿಫ್ಟ್ ನಿಂದ ಹೊರಬಂದಿದ್ದಾರೆ.

ಕರೆಂಟ್ ಬಂದ ಬಳಿಕವೂ ಲಿಫ್ಟ್ ವರ್ಕ್ ಆಗಿಲ್ಲ. ತಾಂತ್ರಿಕ ದೋಷದಿಂದ ಲಿಫ್ಟ್ ಕೆಟ್ಟು ನಿಂತಿದ್ದು, ಟೆಕ್ನಿಷಿಯನ್ ಕರೆಸಿ ಸರಿಪಡಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular