HomeIndiaಟಿಎಂಸಿ ಕಾರ್ಯಕರ್ತರು ಕಪಾಳಕ್ಕೆ ಹೊಡೆದರೆ ತಿರುಗಿಸಿ ನಾಲ್ಕೈದು ಬಿಡಿ ಎಂದ ಬಿಜೆಪಿ ಸಂಸದೆ...!

ಟಿಎಂಸಿ ಕಾರ್ಯಕರ್ತರು ಕಪಾಳಕ್ಕೆ ಹೊಡೆದರೆ ತಿರುಗಿಸಿ ನಾಲ್ಕೈದು ಬಿಡಿ ಎಂದ ಬಿಜೆಪಿ ಸಂಸದೆ…!

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ‘ದೀದಿ ಸುರಕ್ಷಾ ಕವಚ’ ಎಂಬ ಸರ್ಕಾರಿ ಸಭೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಸಾಗರ್ ಬಿಸ್ವಾಸ್ ಎಂಬವರು ರಸ್ತೆ ಸಮಸ್ಯೆ ಕುರಿತು ಪ್ರಶ್ನಿಸಿದ್ದರು.

ಆಗ ಆತನಿಗೆ ಟಿಎಂಸಿ ಕಾರ್ಯಕರ್ತ ಕಪಾಳ ಮೋಕ್ಷ ಮಾಡಿದ್ದ. ಇದಕ್ಕೆ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ನೀಡಿರುವ ಹೇಳಿಕೆ ಈಗ ಪಶ್ಚಿಮ ಬಂಗಾಳದಲ್ಲಿ ವಾದ – ವಿವಾದಕ್ಕೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾನುವಾರದಂದು ಮಾತನಾಡಿದ್ದ ಲಾಕೆಟ್ ಚಟರ್ಜಿ, ಒಬ್ಬ ಟಿಎಂಸಿ ಕಾರ್ಯಕರ್ತ ನಿಮಗೆ ಹೊಡೆದ ಎಂಬ ಕಾರಣಕ್ಕೆ ಕಣ್ಣೀರು ಹಾಕಬೇಡಿ. ಅದರ ಬದಲಿಗೆ ಆತನನ್ನು ಕಂಬಕ್ಕೆ ಕಟ್ಟಿ ನಾಲ್ಕೈದು ಸಲ ಕಪಾಳಕ್ಕೆ ಬಾರಿಸಿ ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular