HomeLatest Newsಭೀಕರ ಅಪಘಾತ: ಬಿಜೆಪಿ ಶಾಸಕಿ ದೀಪ್ತಿ ಕಿರಣ್ ಸ್ಥಿತಿ ಗಂಭೀರ

ಭೀಕರ ಅಪಘಾತ: ಬಿಜೆಪಿ ಶಾಸಕಿ ದೀಪ್ತಿ ಕಿರಣ್ ಸ್ಥಿತಿ ಗಂಭೀರ

ಜೈಪುರ: ಬಿಜೆಪಿ ಶಾಸಕಿ ದೀಪ್ತಿ ಕಿರಣ್ ಕಾರು ಅಪಘಾತಕ್ಕೀಡಾಗಿದ್ದು, ಶಾಸಕಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಉದಯಪುರ-ರಾಜ್ಸ್ ಮಂದರ್ ಹೆದ್ದಾರಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಶಾಸಕಿ ದೀಪ್ತಿ ಕಿರಣ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ದೀಪ್ತಿಯವರ ಪಕ್ಕೆಲುಬು ಮುರಿದಿದೆ. ಸದ್ಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೀಪ್ತಿ ಅವರ ಆಪ್ತಸಹಾಯಕ ಮತ್ತು ಕಾರು ಚಾಲಕರಿಗೂ ಗಾಯಗಳಾಗಿವೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕರ ಕಾರಿಗೆ ಗುಜರಾತ್ ನೋಂದಣಿಯುಳ್ಳ ವಾಹನವೊಂದು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular