HomeKarnatakaಕೆಪಿಎಸ್‌ಸಿ ಹಗರಣದಲ್ಲಿ ಬಿಜೆಪಿ ನಾಯಕರು ತಮ್ಮ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಬೇಕು: ಪ್ರಿಯಾಂಕ್‌ ಖರ್ಗೆ

ಕೆಪಿಎಸ್‌ಸಿ ಹಗರಣದಲ್ಲಿ ಬಿಜೆಪಿ ನಾಯಕರು ತಮ್ಮ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಬೇಕು: ಪ್ರಿಯಾಂಕ್‌ ಖರ್ಗೆ

ಬೆಂಗಳೂರು,- ಕೆಪಿಎಸ್‌‍ಸಿ ಹಗರಣದಲ್ಲಿ ಬಿಜೆಪಿ ನಾಯಕರು ತಮ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಒತ್ತಾಯಿಸಿದ್ದಾರೆ,

ತಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರಲ್ಲಿ ನಾನೇಕೆ ರಾಜೀನಾಮೆ ಕೊಡಬೇಕು ಎಂದು ಕೇಳಿದರೆ ಅವರಲ್ಲಿ ಸ್ಪಷ್ಟ ಉತ್ತರವಿಲ್ಲ. ಗಟ್ಟಿಯಾಗಿ ಕೂಗಾಡಿದ ಮಾತ್ರಕ್ಕೆ ಸತ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಆದ್ದರಿಂದ, ನನ್ನ ರಾಜೀನಾಮೆಯನ್ನು ಒತ್ತಾಯಿಸುವ ಬದಲು, ಬಿಜೆಪಿ ತಾವು ಕೇಳಿರುವ ಸರಳ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.

ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಬಸವರಾಜ ಕನ್ನಾಳೆ ಅವರ ವಿಷಯದಲ್ಲಿ ಬಿಜೆಪಿ ನಾಯಕರು ಏಕೆ ಮೌನವಾಗಿದ್ದಾರೆ ? ಕನ್ನಾಳೆ ಬಿಜೆಪಿಯ ಅಧಿಕೃತ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಗಳಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಅವರ ಅಪ್ಪಾಜಿಯ ಆಶೀರ್ವಾದ ಪಡೆಯುತ್ತಿರುವುದು ಕಂಡುಬರುತ್ತದೆ ಎಂದು ಲೇವಡಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೌನದ ಬಗ್ಗೆ ಪ್ರಶ್ನೆಗಳು

ಬಿಜೆಪಿ ನಾಯಕರು ಅವರ ಹುಟ್ಟುಹಬ್ಬದ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಅವರ ಉದ್ಯಮಗಳಿಗೆ ಚಾಲನೆ ನೀಡುವುದನ್ನು ಹಾಗೂ ಅವರಿಗೆ ಅತ್ಯಂತ ಪ್ರೀತಿಯಿಂದ ಸಿಹಿ ತಿನಿಸುವುದನ್ನು ಕಾಣಬಹುದು. ಹೀಗಿರುವಾಗ ಬಿಜೆಪಿಗರು ನನ್ನ ರಾಜೀನಾಮೆಗೆ ಮಾತ್ರ ಒತ್ತಾಯಿಸುತ್ತಾರೆ. ದೇಶದಿಂದ ಪರಾರಿಯಾಗಲು ಬಸವರಾಜ ಕನ್ನಾಳೆ ನಡೆಸಿದರೆನ್ನಲಾದ ಪ್ರಯತ್ನದ ಬಗ್ಗೆ ಬಿಜೆಪಿ ನಾಯಕರು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ವಿಷಯ ಬಂದಾಗ ಬಿಜೆಪಿ ನಾಯಕರ ಬಾಯಿ ಏಕೆ ಮುಚ್ಚಿಕೊಂಡಿದೆ? ಮತ್ತು ಇನ್ನೂ ದೊಡ್ಡ ಪ್ರಶ್ನೆಯೊಂದಿದೆ, ಜನರನ್ನು ಸದಸ್ಯರು ಮತ್ತು ಅಧ್ಯಕ್ಷರನ್ನಾಗಿ ಮಾಡಲು ಬಿಜೆಪಿ ನಾಯಕರು ಎಷ್ಟು ಹಣ ಪಡೆದಿದ್ದಾರೆ? ವಾಸ್ತವವಾಗಿ ಎಷ್ಟು ಬಿಜೆಪಿ ನಾಯಕರು ಹಗರಣದ ಬಗ್ಗೆ ಮಾತನಾಡಿದ್ದಾರೆ ಅಥವಾ ಹೊಣೆಗಾರಿಕೆಗಾಗಿ ಒತ್ತಾಯಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular