‘ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಯತ್ನಾಳ್ ರನ್ನು ಕಾಂಗ್ರೆಸ್ ಏಜೆಂಟ್ ಎನ್ನುತ್ತಿದ್ದಾರೆ’ : ಸಚಿವ ಎಂ.ಬಿ ಪಾಟೀಲ್

ಬೆಂಗಳೂರು : ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಯತ್ನಾಳ್ ರನ್ನು ಕಾಂಗ್ರೆಸ್ ಏಜೆಂಟ್ ಎನ್ನುತ್ತಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬಸವನಗೌಡ ಯತ್ನಾಳ್ ಅವರು ಕಳೆದ ಐದೂವರೆ ವರ್ಷಗಳಿಂದಲೂ ತಮ್ಮದೇ ನಾಯಕರ ವಿರುದ್ಧ ಒಂದಾದ ಮೇಲೆ ಒಂದರೊಂತೆ ಆರೋಪಗಳನ್ನು ಮಾಡುತ್ತಿದ್ಧಾರೆ. ಅವರ ವಿರುದ್ಧ ಕ್ರಮ ಜರುಗಿಸಲಾಗದಷ್ಟು ಬಿಜೆಪಿ ಕರ್ನಾಟಕ ದುರ್ಬಲವಾಗಿದೆ! ಯತ್ನಾಳ್ ಆರೋಪಗಳು ಸತ್ಯವಾಗಿರಬೇಕು ಹೀಗಾಗಿಯೇ ಕ್ರಮ ಜರುಗಿಸಲು ಹೆದರುತ್ತಿದ್ದಾರೆ! ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು ಆರೋಪಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಗೂ ಯತ್ನಾಳ್ ಅವರಿಗೂ ಯಾವುದೇ ಸಂಬಂಧವಿಲ್ಲ’ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read