HomeKarnatakaಬಿಜೆಪಿ ಯುವ ಮೋರ್ಚಾ ಮುಖಂಡನ ವಿರುದ್ಧ ಅತ್ಯಾಚಾರ, ಬ್ಲ್ಯಾಕ್ ಮೇಲ್ ಆರೋಪ: ಪ್ರಕರಣ ದಾಖಲು

ಬಿಜೆಪಿ ಯುವ ಮೋರ್ಚಾ ಮುಖಂಡನ ವಿರುದ್ಧ ಅತ್ಯಾಚಾರ, ಬ್ಲ್ಯಾಕ್ ಮೇಲ್ ಆರೋಪ: ಪ್ರಕರಣ ದಾಖಲು

ಶಿವಮೊಗ್ಗ: ಬಿಜೆಪಿ ಯುವ ಮೋರ್ಚಾ ಮುಖಂಡ ಹಾಗೂ ವಕೀಲನಾಗಿರುವ ಭರತ್ ಬಿ.ಎಸ್ ವಿರುದ್ಧ ಅತ್ಯಾಚಾರ ಹಾಗೂ ಬ್ಲ್ಯಾಕ್ ಮೇಲ್ ಆರೋಪ ಕೇಳಿಬಂದಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬಿಜೆಪಿಯ ಯುವ ಮೋರ್ಚಾ ಮುಖಂಡನಾಗಿರುವ ಭರತ್ ಬಿ.ಎಸ್, 23 ವರ್ಷದ ಮಹಿಳೆಯೊಬ್ಬರ ಬಳಿ ಆಕೆಯ ಪತಿಯ ಸ್ನೇಹಿತ ಎಂದು ಪರಿಚಯಿಸಿಕೊಂಡು ಇನ್ ಸ್ಟಾ ಗ್ರಾಂ ಮೂಲಕ ಪರಿಚಯನಾಗಿದ್ದ.

ಹೀಗೆ ಆರಂಭವಾದ ಪರಿಚಯ ಸ್ನೇಹಕ್ಕೆ ತಿರುಗಿದೆ. ದಿನಸ್ ಅಂಗಡಿಗೆ ಪದೇ ಪದೇ ಬರುತ್ತಿದ್ದ, ಮೈ-ಕೈ ಮುಟ್ಟಿ ಕಿರುಕುಳ ನೀಡುತ್ತಿದ್ದ. ಏ.11ರಂದು ಮಹಿಳೆಯ ಪತಿ, ತನ್ನ ಸ್ನೇಹಿತ ಭರತ್ ಮನೆಗೆ ಬರ್ತಾನೆ. ಅವನಿಗೆ ಹಣ ನೀಡುವಂತೆ ಹೇಳಿದ್ದರು. ಪತಿ ಸೂಚನೆಯಂತೆ ಹಣ ನೀಡಲು ಮುಂದಾದಾಗ ಒಂಟಿಯಾಗಿದ್ದ ತನ್ನ ಮೇಲೆ ಭರತ್ ಅತ್ಯಾಚಾರವೆಸಗಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಷಯ ಬಾಅಯ್ಬಿಟ್ಟರೆ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಹಣದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ. ಅದಾದ ಬಳಿಕ ಏ.25ರಂದು ಅಂಗಡಿಗೆ ಬಂದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ. ಈ ನಡುವೆ ಮಹಿಳೆಯ ಪತಿ ಮೊಬೈಲ್ ನೋಡುತ್ತಿದ್ದಾಗ ಇನ್ ಸ್ಟಾ ಗ್ರಾಂ ಬ್ಲಾಕ್ ಮಾಡಲಾಗಿದೆ ಯಾಕೆ ಎಂದು ಪ್ರಶಿಸಿದ್ದಾರೆ. ಈ ವೇಳೆ ಮಹಿಳೆ ನಡೆದ ಘಟನೆಗಳಬಗ್ಗೆ ಬಾಯ್ಬಿಟ್ಟಿದ್ದಾರೆ.

ಅತ್ಯಾಚಾರವೆಸಗಿರುವ ಭರತ್ ವಿರುದ್ಧ ದಂಪತಿ ಭದ್ರಾವತಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular