ಬೆಂಗಳೂರು: ಅಬಕಾರಿ ಇಲಾಖೆ ಹಗರಣದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಅಹೋರಾತ್ರಿ ಧರಣಿಗೆ ಬಿಜೆಪಿ ಮತ್ತು ಜೆಡಿಎಸ್ ತೀರ್ಮಾನ ಕೈಗೊಂಡಿವೆ.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ವಿ. ಸುನಿಲ್ ಕುಮಾರ್, ಅಬಕಾರಿ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದು, ಈ ವೇಳೆ ಆರ್.ಬಿ. ತಿಮ್ಮಾಪುರ ಬೆಂಬಲಕ್ಕೆ ಇತರೆ ಸಚಿವರು ನಿಂತಿದ್ದಾರೆ. ಅನ್ಯ ರಾಜ್ಯಗಳಿಗೆ ಹಣ ಕಳಿಸುವ ಉದ್ದೇಶವೇ ಎಂದು ವಿಪಕ್ಷ ಸದಸ್ಯರು ಪ್ರಶ್ನಿಸಿದ್ದಾರೆ. ತಿಮ್ಮಾಪುರ ಅವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸಬೇಕೆಂದು, ಆಗ್ರಹಿಸಿದ್ದಾರೆ.
ಈ ಬೆಳೆ ಸದನದಲ್ಲಿ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಕಲಾಪವನ್ನು ಸ್ವೀಕರ್ ಯು.ಟಿ. ಖಾದರ್ ಮುಂದೂಡಿದ್ದಾರೆ. ಅಬಕಾರಿ ಇಲಾಖೆ ಹಗರಣದಲ್ಲಿ ಸಚಿವ ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಿ ಸದನದಲ್ಲಿ ಅಹೋರಾತ್ರಿಯ ಧರಣಿ ನಡೆಸಲು ಬಿಜೆಪಿ, ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಕಲಾಪ ಮುಂದೂಡಿದ ನಂತರವೂ ಸದನದಲ್ಲೇ ಉಳಿದು ಘೋಷಣೆ ಕೂಗಿದ್ದಾರೆ.

