HomeKarnatakaಬಿಜೆಪಿ ಹೈಕಮಾಂಡ್ ನಿಂದ ಕರ್ನಾಟಕದ ಲಿಂಗಾಯತರು, ಹಿಂದುಳಿದ ವರ್ಗ, ದಲಿತರಿಗೆ ಮಹಾ ದ್ರೋಹ; ಕಾಂಗ್ರೆಸ್ ಕಿಡಿ

ಬಿಜೆಪಿ ಹೈಕಮಾಂಡ್ ನಿಂದ ಕರ್ನಾಟಕದ ಲಿಂಗಾಯತರು, ಹಿಂದುಳಿದ ವರ್ಗ, ದಲಿತರಿಗೆ ಮಹಾ ದ್ರೋಹ; ಕಾಂಗ್ರೆಸ್ ಕಿಡಿ

ಬೆಂಗಳೂರು: ಬಿಜೆಪಿ ಹೈಕಮಾಂಡ್ ಕರ್ನಾಟಕದ ಲಿಂಗಾಯತರಿಗೆ, ಹಿಂದುಳಿದ ವರ್ಗದವರಿಗೆ, ದಲಿತರಿಗೆ ಮಹಾ ದ್ರೋಹ ಎಸಗಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

ಕುಮಾರಸ್ವಾಮಿಯವರು ಹೇಳಿದ “ಪೇಶ್ವೆ ವಂಶಸ್ಥರಿಗೆ” ಎರಡೆರಡು ಬಾರಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಲಾಗುತ್ತದೆ, ಲಿಂಗಾಯತರಿಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿಗಿರಿ ಕೊಡದಿರುವುದು ಬಿಜೆಪಿಯ ಲಿಂಗಾಯತ ವಿರೋಧಿ ಧೋರಣೆಗೆ ಸಾಕ್ಷಿ ಎಂದು ಕಿಡಿಕಾರಿದೆ.

ಕರ್ನಾಟಕದ ಬಿಜೆಪಿಯಲ್ಲಿ ದಲಿತರು, ಹಿಂದುಳಿದವರಿಗೆ ಸ್ಥಾನವೂ ಇಲ್ಲ, ಮಾನವೂ ಇಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ನ್ಯಾಯ ಎನ್ನುವುದು ಬಿಜೆಪಿಯ ಬೈಲಾದಲ್ಲೇ ಇಲ್ಲ! ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular