HomeKarnatakaಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ರೈತರಿಗೆ ನೀಡುವ ಹಣವನ್ನೂ ನುಂಗಿದ ಕಾಂಗ್ರೆಸ್: ಸ್ವಯಂ ಉದ್ಯೋಗದ ಎಸ್...

ಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ರೈತರಿಗೆ ನೀಡುವ ಹಣವನ್ನೂ ನುಂಗಿದ ಕಾಂಗ್ರೆಸ್: ಸ್ವಯಂ ಉದ್ಯೋಗದ ಎಸ್ ಟಿ ಯುವಕರ ಕನಸಿಗೂ ತಣ್ಣೀರೆರಚಿದ ರಾಜ್ಯಸರ್ಕಾರ: ಬಿಜೆಪಿ ಕಿಡಿ

ಬೆಂಗಳೂರು: ಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ರೈತರಿಗೆ ನೀಡಲಾಗುತ್ತಿದ್ದ ಹಣವನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರ ನುಂಗಿ ಹಾಕಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ವಾಲ್ಮೀಕಿ ಗುರುಗಳು ಕ್ಷಮಿಸಲಾರ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಗ್ಂಗಾ ಕಲ್ಯಾಣ ಯೋಜನೆಯಡಿ ಎಸ್ ಟಿ ಸಮುದಾಯದ ಸಣ್ಣ ರೈತರಿಗೆ ಬೋರ್ವೆಲ್ ಹಾಕಿಸಿಕೊಳ್ಳಲು ಮೀಸಲಿರಿಸಿದ್ದ ಹತ್ತಾರು ಕೋಟಿ ರೂಪಾಯಿಗಳನ್ನು ಕಾಂಗ್ರೆಸ್ ಸರ್ಕಾರ ನುಂಗಿ ಹಾಕಿದೆ ಎಂದು ಬಿಜೆಪಿ ಆರೋಪಿಸಿದೆ.

ಎಸ್‌ಟಿ ಸಮುದಾಯದ 187 ಕೋಟಿ ರೂ. ಲೂಟಿ ಹೊಡೆದಿದೆ ಕಾಂಗ್ರೆಸ್ ಸರ್ಕಾರ, ಪಾಪಪ್ರಜ್ಞೆಯಿಲ್ಲದ ಭ್ರಷ್ಟ ಸಿದ್ದರಾಮಯ್ಯನವರನ್ನು ಮಹರ್ಷಿ ವಾಲ್ಮೀಕಿ ಗುರುಗಳು ಹಾಗೂ ಸಮುದಾಯ ಎಂದೂ ಕ್ಷಮಿಸುವುದಿಲ್ಲ!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಮೀಸಲಿದ್ದ ಅನುದಾನ ಕೊಳ್ಳೆ ಹೊಡೆದು ಎಸ್‌ಟಿ ಸಮುದಾಯದ ಯುವಕರ ಕನಸಿಗೆ ಕೊಳ್ಳಿಯಿಟ್ಟಿದೆ ಸಿದ್ದರಾಮಯ್ಯನವರ ಸರ್ಕಾರ ಎಂದು ಕಿಡಿಕಾರಿರೆ.

 

For Latest News Updates, Join Our Whatsapp Community🚩
RELATED ARTICLES

Most Popular