ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ಜಾರಿ ನಿರ್ದೇಶನಾಲಯ (ಇಡಿ)ಯಿಂದ ಬಂಧಿಸಲ್ಪಟ್ಟಿದ್ದ ಕಿಂಗ್ ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ರಾಬಿನ್ ಖಂಡೇಲವಾಲಗೆ ಜಾಮೀನು ಮಂಜೂರು ಮಾಡಲಾಗಿದೆ.
ಇಡಿ ಬಂಧನದಿಂದ ಜಾಮೂನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಶ್ರೀಕಿ ಹಾಗೂ ರಾಬಿನ್ ಖಂಡೇವಾಲಾಗೆ ಜಾಅಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಹ್ಯಾಕ್ ಮಾಡಿ ಸಂಗ್ರಹಿಸಿದ ಹಣ ಐಷಾರಾಮಿ ಬದುಕಿಗೆ ವೆಚ್ಚ ಮಾಡಲಾಗಿದೆ. ಡಾರ್ಕ್ ವೆಬ್ ಮೂಲಕ ಹಣ ವರ್ಗಾಯಿಸಿರುವ ಆರೋಪವಿದೆ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲ ಮಧು ಎನ್ ರಾವ್ ವಾದ ಮಂಡಿಸಿದರು. ಆರೋಪಿಗಳಿಂದ ಏನೂ ಜಪ್ತಿಯಾಗಿಲ್ಲ, ಹೇಳಿಕೆ ಮಾತ್ರ ಆಧರಿಸಿ ಕೇಸ್ ದಾಖಿಸಿದ್ದಾರೆ ಎಂದು ಆರೋಪಿಗಳ ಪರ ವಕೀಲ ಬಿಪಿನ್ ಹೆಗ್ಡೆ, ಸಂದೇಶ್ ಚೌಟ ಪ್ರತಿವಾದ ಮಂಡಿಸಿದರು. ಈ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠ, ಶ್ರೀಕಿ ಹಾಗೂ ರಾಬಿನ್ಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.

