ಭಾರತೀಯರ ನೆಚ್ಚಿನ ಆಹಾರ ಯಾವುದು ಎಂದು ಕೇಳಿದರೆ ಅದಕ್ಕೆ ಉತ್ತರ ‘ಬಿರಿಯಾನಿ’ ಎಂಬುದನ್ನು 2025ರ ಸ್ವಿಗ್ಗಿ ವರದಿಯು ಮತ್ತೊಮ್ಮೆ ಸಾಬೀತುಪಡಿಸಿದೆ. ಸ್ವಿಗ್ಗಿಯ 10ನೇ ವರ್ಷದ ‘ಹೌ ಇಂಡಿಯಾ ಸ್ವಿಗ್ಗಿಡ್’ (How India Swiggy’d 2025) ವರದಿಯ ಪ್ರಕಾರ, ಸತತ ಹತ್ತನೇ ವರ್ಷವೂ ಬಿರಿಯಾನಿ ಅತಿ ಹೆಚ್ಚು ಆರ್ಡರ್ ಮಾಡಲಾದ ಖಾದ್ಯವಾಗಿ ಹೊರಹೊಮ್ಮಿದೆ.
ಬಿರಿಯಾನಿ ಕ್ರೇಜ್ ಹೇಗಿದೆ? 2025ರಲ್ಲಿ ಸ್ವಿಗ್ಗಿ ಮೂಲಕ ಭಾರತೀಯರು ಬರೋಬ್ಬರಿ 9.3 ಕೋಟಿ (93 Million) ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಅಂದರೆ ಭಾರತದಲ್ಲಿ ಪ್ರತಿ ಸೆಕೆಂಡಿಗೆ 3.25 ಬಿರಿಯಾನಿ ಅಥವಾ ಪ್ರತಿ ನಿಮಿಷಕ್ಕೆ 194 ಬಿರಿಯಾನಿಗಳು ಡೆಲಿವರಿ ಆಗಿವೆ! ಇದರಲ್ಲಿ ಚಿಕನ್ ಬಿರಿಯಾನಿ (5.77 ಕೋಟಿ ಆರ್ಡರ್) ಅತ್ಯಂತ ಜನಪ್ರಿಯ ಮಾದರಿಯಾಗಿದೆ.
ಎರಡನೇ ಸ್ಥಾನ ಯಾರಿಗೆ? ಬಿರಿಯಾನಿ ನಂತರ ಎರಡನೇ ಸ್ಥಾನವನ್ನು ಬರ್ಗರ್ (Burger) ಅಲಂಕರಿಸಿದೆ. ವರ್ಷವಿಡೀ ಸುಮಾರು 4.42 ಕೋಟಿ ಬರ್ಗರ್‌ಗಳನ್ನು ಭಾರತೀಯರು ಸವಿದಿದ್ದಾರೆ.
ಟಾಪ್ ಪಟ್ಟಿಯಲ್ಲಿರುವ ಇತರೆ ಖಾದ್ಯಗಳು:
- ಮೂರನೇ ಸ್ಥಾನ: ಪಿಜ್ಜಾ (4.01 ಕೋಟಿ ಆರ್ಡರ್‌ಗಳು)
- ನಾಲ್ಕನೇ ಸ್ಥಾನ: ವೆಜ್ ದೋಸೆ (2.62 ಕೋಟಿ ಆರ್ಡರ್‌ಗಳು)
ವರದಿಯ ಇತರೆ ಸ್ವಾರಸ್ಯಕರ ಸಂಗತಿಗಳು:
- ಬ್ರೇಕ್‌ಫಾಸ್ಟ್: ಬೆಳಗಿನ ಉಪಾಹಾರದಲ್ಲಿ ಇಡ್ಲಿ (1.1 ಕೋಟಿ) ಮೊದಲ ಸ್ಥಾನದಲ್ಲಿದ್ದರೆ, ವೆಜ್ ದೋಸೆ ಎರಡನೇ ಸ್ಥಾನದಲ್ಲಿದೆ.
- ಸ್ನಾಕ್ಸ್ ಟೈಮ್: ಸಂಜೆ 3 ರಿಂದ 7 ರ ನಡುವೆ ಸಮೋಸಾ ಮತ್ತು ಅದ್ರಕ್ ಚಾಯ್ (ಶುಂಠಿ ಟೀ) ಅತಿ ಹೆಚ್ಚು ಆರ್ಡರ್ ಮಾಡಲಾದ ಜೋಡಿಯಾಗಿದೆ.
- ಡೆಸರ್ಟ್ಸ್: ಸಿಹಿ ಪದಾರ್ಥಗಳಲ್ಲಿ ‘ವೈಟ್ ಚಾಕ್ಲೇಟ್ ಕೇಕ್’ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಚಾಕ್ಲೇಟ್ ಕೇಕ್ ಮತ್ತು ಗುಲಾಬ್ ಜಾಮೂನ್ ಇವೆ.
- ಗ್ಲೋಬಲ್ ಫುಡ್: ಮೆಕ್ಸಿಕನ್, ಟಿಬೆಟಿಯನ್ ಮತ್ತು ಕೊರಿಯನ್ ಆಹಾರಗಳಿಗೂ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ.
“ಭಾರತದಲ್ಲಿ ಆಹಾರವು ಕೇವಲ ಹಸಿವು ಇಂಗಿಸುವ ದ್ರವ್ಯವಲ್ಲ, ಅದು ಭಾವನೆಗಳ ಸಂಕೇತ” ಎಂದು ಸ್ವಿಗ್ಗಿ ಮಾರುಕಟ್ಟೆಯ ಸಿಇಒ ರೋಹಿತ್ ಕಪೂರ್ ತಿಳಿಸಿದ್ದಾರೆ. ಮುಂಬೈನ ಒಬ್ಬ ಗ್ರಾಹಕ ವರ್ಷದಲ್ಲಿ 3,196 ಬಾರಿ ಆರ್ಡರ್ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.

