HomeLatest Newsಕುಖ್ಯಾತ ಅಂತರಾಜ್ಯ ಬೈಕ್ ಕಳ್ಳರ ಗ್ಯಾಂಗ್ ಅರೆಸ್ಟ್: 95.50 ಲಕ್ಷ ಮೌಲ್ಯದ 21 ವಾಹನ ಜಪ್ತಿ

ಕುಖ್ಯಾತ ಅಂತರಾಜ್ಯ ಬೈಕ್ ಕಳ್ಳರ ಗ್ಯಾಂಗ್ ಅರೆಸ್ಟ್: 95.50 ಲಕ್ಷ ಮೌಲ್ಯದ 21 ವಾಹನ ಜಪ್ತಿ

ಬೆಳಗವಿ: ಕುಖ್ಯಾತ ಅಂತಾರಾಜ್ಯ ವಾಹನಗಳ ಕಳ್ಳತನ ನಡೆಸುತ್ತಿದ್ದ ಗ್ಯಾಂಗ್ ಅನ್ನು ಬಂಧಿಸಿ, 95.50 ಲಕ್ಷ ಮೌಲ್ಯದ 21 ವಾಹನಗಳನ್ನು ಜಪ್ತಿ ಮಾಡುವಲ್ಲಿ ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ನೀಲಜಿ ಗ್ರಾಮದಲ್ಲಿ 2025ರ ನವೆಂಬರ್ ತಿಂಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಅಶೋಕ್ ಲೇಲ್ಯಾಂಡ್ ಮಿನಿ ಗೂಡ್ಸ್ ಟ್ರಕ್ ಕಳ್ಳತನ ಆಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಾಗ, ಸಿಸಿಟಿವಿ ದೃಶ್ಯಗಳ ಸುಳಿವಿನ ಆಧಾರದ ಮೇಲೆ ಈ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.

ಶಿವಮೊಗ್ಗ, ಭದ್ರಾವತಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಮೂವರು ಆರೋಪಿಗಳು ರಾಜ್ಯದ ವಿವಿಧ ನಗರಗಳಿಗೆ ರಾತ್ರಿ ವೇಳೆ ತೆರಳಿ ಮೊದಲು ವಿವಿಧ ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿ, ನಂತರ ಅದೇ ವಾಹನಗಳನ್ನು ಬಳಸಿ ವಿವಿಧ ಸ್ಥಳಗಳಲ್ಲಿ ನಿಲ್ಲಿಸಿದ್ದ ನಾಲ್ಕು ಚಕ್ರದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳ್ಳತನ ಮಾಡಿದ ವಾಹನಗಳನ್ನು ನಂತರ ಆರೋಪಿಗಳಾದ ಯುಸುಫ್ ಖಾನ್ (ಧಾರವಾಡ), ಜಾಕೀರ್ ಹುಸೇನ್ (ಧಾರವಾಡ), ಆಜಾದ್ ಇಬ್ರಾಹಿಂ ಮುತವಲ್ಲಿ (ವಿಜಯಪುರ), ಶಫೀಕ್ ಅಹಮ್ಮದ್ (ವೆಲ್ಲೂರು, ತಮಿಳುನಾಡು) ಹಾಗೂ ಬಸಿರಹಮ್ಮದ್ ಮಕಾನದಾರ (ದಾಂಡೇಲಿ) ಅವರಿಗೆ ಮಾರಾಟ ಮಾಡಿ ವಿಲೇವಾರಿ ಮಾಡಲಾಗುತ್ತಿತ್ತು.ಸದ್ಯ ಈ ಎಲ್ಲಾ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪೊಲೀಸರು ಆರೋಪಿಗಳಿಂದ 8 ಅಶೋಕ ಲೇಲ್ಯಾಂಡ್ ಮಿನಿ ಗೂಡ್ಸ್ ಟ್ರಕ್​ಗಳು, 5 ರಾಯಲ್ ಎನ್​ಫೀಲ್ಡ್, 5 ಸುಜುಕಿ ಎಕ್ಸಸ್ ಸ್ಕೂಟರ್​ಗಳು, 2 ಹೀರೋ ಸ್ಪ್ಲೆಂಡರ್ ಬೈಕ್​ಗಳು,‌ 1 ಹೊಂಡಾ ಡಿಯೋ ಸ್ಕೂಟರ್ ಹೀಗೆ ಒಟ್ಟು 21 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಾಹನಗಳು ಮಾರಿಹಾಳ, ತುಮಕೂರು, ನೆಲಮಂಗಲ, ಯಶವಂತಪುರ, ಅರಸಿಕೆರೆ, ದಾವಣಗೆರೆ, ಬೆಂಗಳೂರು ಸೇರಿದಂತೆ ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಶಿರೋಳ ಪ್ರದೇಶಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿವೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular