
ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್ ರಾಂಗ್ ಸೈಡ್‌ನಲ್ಲಿ ಪುಣೆ ಕಡೆಗೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಘಟನೆಯ ಭೀಕರ ದೃಶ್ಯ ಎದೆನಡುಗಿಸುವಂತಿದೆ. ಅಪಘಾತ ಸಂಭವಿಸ್ತಿದ್ದಂತೆ ಜನ ಬೈಕ್ ಬಿದ್ದ ಸ್ಥಳಕ್ಕೆ ಓಡೋಡಿ ಬರುತ್ತಾರೆ.
ಪೊಲೀಸರು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಥಾಣೆ ಜಿಲ್ಲೆಯ ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ಇದೇ ರೀತಿಯ ಭೀಕರ ಘಟನೆ ನಡೆದ ಒಂದು ದಿನದ ನಂತರ ಈ ಅಪಘಾತ ಸಂಭವಿಸಿದೆ.
ಖಡವ್ಲಿ ಫಟಾ ಬಳಿ ಕಾರ್ ಗೆ ಟ್ರಕ್ ಡಿಕ್ಕಿ ಹೊಡೆದ ಅಪಘಾತ ಪ್ರಕರಣದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ 8 ಮಂದಿ ಗಾಯಗೊಂಡಿದ್ದರು.

