HomeAutoBREAKING NEWS: ಬೈಕ್ ವ್ಹೀಲಿಂಗ್ ತಡೆದಿದ್ದಕ್ಕೆ ಪೊಲೀಸರ ಮೇಲೆಯೇ ಪುಂಡರಿಂದ ಹಲ್ಲೆ

BREAKING NEWS: ಬೈಕ್ ವ್ಹೀಲಿಂಗ್ ತಡೆದಿದ್ದಕ್ಕೆ ಪೊಲೀಸರ ಮೇಲೆಯೇ ಪುಂಡರಿಂದ ಹಲ್ಲೆ

ಕೊಪ್ಪಳ: ಬೈಕ್ ವ್ಹೀಲಿಂಗ್ ತಡೆದಿದ್ದಕ್ಕೆ ಪೊಲೀಸರ ಮೇಲೆಯೇ ಪುಂಡರು ಹಲ್ಲೆ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದಲ್ಲಿ ನಡೆದಿದೆ.

ಗಂಗಾವತಿ ಹೊರವಲಯದಲ್ಲಿ ಪುಂಡರ ಗುಂಪು ಬೈಕ್ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆಯುತ್ತಿತ್ತು. ಈ ವೇಳೆ ಪೊಲೀಸ್ ಕಾನ್ಸ್ ಟೇಬಲ್ ಬಸವರಾಜು ಎಂಬುವವರು ಬೈಕ್ ವ್ಹೀಲಿಂಗ್ ತಡೆಯಲು ಮುಂದಾಗಿದ್ದಾರೆ. ಬೈಕ್ ವ್ಹೀಲಿಂಗ್ ತಡೆದಿದ್ದಕ್ಕೆ ಪುಂಡರು, ಕಾನ್ಸ್ ಟೇಬಲ್ ಬಸವರಾಜು ಅವರನ್ನು ಹಿಡಿದು ಥಳಿಸಿದ್ದಾರೆ. ಸ್ಥಳಕ್ಕೆ ಬಂದ ಮತ್ತೋರ್ವ ಕಾನ್ಸ್ ಟೇಬಲ್ ಬಿಡಿಸಲು ಬರುತ್ತಿದ್ದಂತೆ ಅವರ ಮೇಲೂ ಹಲ್ಲೆ ನಡೆಸಿ ಥಳಿಸಿದ್ದಾರೆ.

ಸ್ಥಳೀಯರ ಸಹಕಾರದಿಂದ ಗಂಗಾವತಿ ಗ್ರಾಮಾಂತರ ಠಾಣೆ ಪೊಲೀಸರು ಪುಂಡರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular