HomeKarnatakaಡಿಸಿಪಿ ಕಚೇರಿ ಎದುರೇ ಬೈಕ್ ವ್ಹೀಲಿಂಗ್; ವಾಹನ ಸವಾರರಿಗೆ ರಸ್ತೆ ಬಿಡದೇ ಯುವಕರ ಪುಂಡಾಟ

ಡಿಸಿಪಿ ಕಚೇರಿ ಎದುರೇ ಬೈಕ್ ವ್ಹೀಲಿಂಗ್; ವಾಹನ ಸವಾರರಿಗೆ ರಸ್ತೆ ಬಿಡದೇ ಯುವಕರ ಪುಂಡಾಟ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ವ್ಹೀಲಿಂಗ್ ಪುಂಡರ ಹುಚ್ಚಾಟ ಆರಂಭವಾಗಿದೆ. ರಾತ್ರಿಯಾಗುತ್ತಿದ್ದಂತೆ ಕೆಲ ಯುವಕರ ಗುಂಪು ಬೈಕ್ ಗಳಲ್ಲಿ ವ್ಹೀಲಿಂಗ್ ಮಾಡುತ್ತಾ, ರಸ್ತೆಯುದ್ದಕ್ಕೂ ಪುಂಡಾಟ ಮೆರೆಯುತ್ತಿದ್ದಾರೆ.

ಕೆಲ ಪುಂಡರ ಗುಂಪು ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಬಳಿಯ ಸೌತ್ ಎಂಡ್ ಸರ್ಕಲ್ ನಲ್ಲಿ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೇ ಪುಂಡರು ಇತರ ವಾಹನ ಸವಾರರಿಗೂ ರಸ್ತೆ ಬಿಡದೇ ತೊಂದರೆಯುಂಟು ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಡರಾತ್ರಿ 11 ಗಂಟೆ ಸುಮಾರಿಗೆ ಮೂರ್ನಾಲ್ಕು ಡಿಯೋ ಬೈಕ್ ಗಳಲ್ಲಿ ಯುವಕರ ಗುಂಪು ವ್ಹೀಲಿಂಗ್ ಮಾಡಿ ಸವಾರರಿಗೆ ತೊಂದರೆ ನೀಡಿದ್ದಾರೆ. ಅಲ್ಲದೇ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳಬಾರದು ಎಂದು ನಂಬರ್ ಪ್ಲೇಟ್ ಇಲ್ಲದ ಬೈಕ್ ಬಳಸಿದ್ದಾರೆ. ಯುವಕರ ಪುಂಡಾಟದ ದೃಶ್ಯ ಕಾರೊಂದರ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular