HomeKarnatakaBREAKING NEWS: ಬೈಕ್ ಓಡಿಸುತ್ತಿದ್ದಾಗಲೇ ಸವಾರನಿಗೆ ಹೃದಯಾಘಾತ: ತಡೆಗೋಡೆಗೆ ಡಿಕ್ಕಿ ಹೊಡೆದು ವ್ಯಕ್ತಿ ದುರ್ಮರಣ

BREAKING NEWS: ಬೈಕ್ ಓಡಿಸುತ್ತಿದ್ದಾಗಲೇ ಸವಾರನಿಗೆ ಹೃದಯಾಘಾತ: ತಡೆಗೋಡೆಗೆ ಡಿಕ್ಕಿ ಹೊಡೆದು ವ್ಯಕ್ತಿ ದುರ್ಮರಣ

ಮೈಸೂರು: ಬೈಕ್ ಓಡಿಸುತ್ತಿದ್ದಾಗಲೇ ಬೈಕ್ ಸವಾರನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ನಂಜೆದೇವರಪುರದ ರವಿ ಮೃತ ದುರ್ದೈವಿ. ಬೈಕ್ ಓಡಿಸಿಕೊಂಡು ಬರುತ್ತಿದ್ದ ವೇಳೆ ಏಕಏಕಿ ಹೃದಯಾಘಾತವಾಗಿದ್ದು, ಬೈಕ್ ಸವಾರ ಕೆಳಗೆ ಬೀಳುತ್ತಿರುವ ದೃಶ್ಯ ಸಿಸಿಟಿಯಿಯಲ್ಲಿ ಸೆರೆಯಾಗಿದೆ.

ಬೈಕ್ ಸವಾರನಿಗೆ ಹಾರ್ಟ್ ಅಟ್ಯಾಕ್ ಆಗುತ್ತಿದ್ದಂತೆ ನಿಯಂತ್ರಣ ತಪ್ಪಿದ ಬೈಕ್, ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಬೈಕ್ ಸವಾರ ರವಿ ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular