ಸೂರತ್ : ಗಾಳಿಪಟದ ದಾರ ತಪ್ಪಿಸಲು ಹೋಗಿ ಸೇತುವೆಯಿಂದ ಬೈಕ್ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಭೀಕರ ಘಟನೆ ಸೂರತ್ ನಲ್ಲಿ ನಡೆದಿದೆ.
ಮಕರ ಸಂಕ್ರಾಂತಿಯಂದು ಸೂರತ್ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ಚಂದ್ರಶೇಖರ್ ಗಾಳಿಪಟದ ದಾರ ತಪ್ಪಿಸಲು ಹೋಗಿ ಫ್ಲೈಓವರ್ನಿಂದ ಸುಮಾರು 70 ಅಡಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದರು.
ಆಗಿದ್ದೇನು..?
35 ವರ್ಷದ ರೆಹಾನ್ ಶೇಖ್ ತನ್ನ ಪತ್ನಿ ರೆಹಾನಾ ಮತ್ತು ಅವರ ಏಳು ವರ್ಷದ ಮಗಳು ಆಯೇಷಾ ಜೊತೆ ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದಾಗ ಗಾಳಿಪಟದ ದಾರವು ಅವರಿಗೆ ಸಿಕ್ಕಿಹಾಕಿಕೊಂಡಿತು. ಒಂದು ಕೈಯಿಂದ ದಾರವನ್ನು ತೆಗೆಯುವ ಪ್ರಯತ್ನದಲ್ಲಿ, ಬೈಕ್ ನಿಯಂತ್ರಣ ತಪ್ಪಿ ಫ್ಲೈಓವರ್ ತಡೆಗೋಡೆಗೆ ಡಿಕ್ಕಿ ಹೊಡೆದು ಸೇತುವೆಯಿಂದ ಕೆಳಗೆ ಬಿದ್ದಿತು.
ಫ್ಲೈಓವರ್ನಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಕುಟುಂಬವು ಗಾಳಿಪಟ ದಾರ ತಪ್ಪಿಸಲು ಹೋಗಿ ಫ್ಲೈಓವರ್ನಿಂದ ಕೆಳಗೆ ಬಿದ್ದಿದೆ. ಫ್ಲೈಓವರ್ ನ ಕೆಳಗೆ ನಿಲ್ಲಿಸಲಾಗಿದ್ದ ಆಟೋ ಮೇಲೆ ಬೈಕ್ ಬಿದ್ದಿದೆ. ಪರಿಣಾಮ ಸವಾರಸ ಸ್ಥಳದಲ್ಲೇ ಮೃತಪಟ್ಟರೆ..ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬೈಕ್ ಬಿದ್ದ ಪರಿಣಾಮ ಆಟೋ ರಿಕ್ಷಾ ಕೂಡ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಆಟೋದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

