HomeKarnatakaBIG NEWS: ಭೀಕರ ಬೈಕ್ ಅಪಘಾತ: ನವವಿವಾಹಿತೆ ದುರ್ಮರಣ

BIG NEWS: ಭೀಕರ ಬೈಕ್ ಅಪಘಾತ: ನವವಿವಾಹಿತೆ ದುರ್ಮರಣ

ಮಂಗಳೂರು: ಡಿವೈಡರ್ ಗೆ ಬೈಕ್ ಡಿಕ್ಕಿಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ನವವಿವಾಹಿತೆ ಸಾವನ್ನಪ್ಪಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳೂರು ಹೊರವಲಯದ ನಾಟೆಕಲ್ ಬಳಿ ನಡೆದಿದೆ.

ದೀಕ್ಷಿತ್ ಎಂಬುವವರ ಪತ್ನಿ 29 ವರ್ಷದ ನಿಧಿ ಮೃತ ಮಹಿಳೆ. ಡಿವೈಡರ್ ಗೆ ಡಿಕ್ಕಿಯಾಗಿ ಪಕ್ಕದ ರಸ್ತೆಗೆ ನುಗ್ಗಿದ ಬೈಕ್ ಪಲ್ಟಿಯಾಗಿ ಬಿದ್ದಿದೆ. ಕೆಳಗೆ ಬಿದ್ದ ಬೈಕ್ ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.

ಅಪಘಾತದ ಭೀಕರ ದೃಶ್ಯ ಮತ್ತೊಂದು ಕಾರಿನ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular