ಚಿಕ್ಕಪ್ಪನ ಶರ್ಟ್ ಧರಿಸಿ ಮಾರುಕಟ್ಟೆಗೆ ಹೋದ ಯುವಕನಿಗೆ ಗುಂಡಿಕ್ಕಿ ಹತ್ಯೆ

ಪಾಟ್ನಾ: ಬಿಹಾರದ ಸಮಷ್ಟಿಪುರ ಜಿಲ್ಲೆಯ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಮಗಧಹಿ ಪ್ರದೇಶದ ಸರ್ಕಾರಿ ಶಾಲೆಯ ಬಳಿ ಶುಕ್ರವಾರ ಸಂಜೆ 18 ವರ್ಷದ ಯುವಕನೊಬ್ಬನನ್ನು ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ.

ಮೃತನನ್ನು ಜಿಲ್ಲೆಯ ಜಿತ್ವಾರ್‌ಪುರ ಬುಲ್ಲೆಚಕ್ ನಿವಾಸಿ ಅಶೋಕ್ ರೈ ಅವರ ಮಗ ಆಯುಷ್ ಯಾದವ್ ಎಂದು ಗುರುತಿಸಲಾಗಿದೆ.

ಮೃತನ ಅಂಕಲ್ ವಿಜಯ್ ಯಾದವ್ ಅವರ ಪ್ರಕಾರ, ಅವರ ಕುಟುಂಬದವರಿಗೆ ನೆರೆಹೊರೆಯವರೊಂದಿಗೆ ಹಿಂದಿನಿಂದಲೂ ಭೂ ವಿವಾದವಿದೆ. ಆಯುಷ್ ತನ್ನ ಶರ್ಟ್ ಧರಿಸಿ ತನ್ನ ಸ್ನೇಹಿತನೊಂದಿಗೆ ಬೈಕ್‌ ನಲ್ಲಿ ಮಾರುಕಟ್ಟೆಗೆ ಹೋಗಿದ್ದ. ಭೂ ವಿವಾದದ ಹೊಂದಿರುವ ನೆರೆಹೊರೆಯವರು ಆಯುಷ್‌ ನನ್ನು ವಿಜಯ್ ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಕೊಂದಿದ್ದಾರೆ.

ಮೃತನ ತಂದೆಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಆಯುಷ್ ತನ್ನ ಅಧ್ಯಯನಕ್ಕಾಗಿ ಪಟ್ಟಣದಲ್ಲಿರುವ ತನ್ನ ತಾಯಿಯ ಅಜ್ಜ-ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದ. ಆಯುಷ್ ಬೈಕ್ ಓಡಿಸುತ್ತಿದ್ದ. ಅವನ ಸ್ನೇಹಿತ ಹಿಂದಿನ ಸೀಟಿನಲ್ಲಿ ಕುಳಿತಿದ್ದ. ಅವನು ತನ್ನ ಚಿಕ್ಕಪ್ಪ ವಿಜಯ್ ರೈ ಅವರ ಶರ್ಟ್ ಧರಿಸಿದ್ದರಿಂದ ಅವನ ಕೊಲೆ ಮಾಡಲಾಗಿದೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಸಜನ್ ಕುಮಾರ್ ಮತ್ತು ಮುಖೇಶ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಪಟ್ಟಣದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ(ಎಎಸ್‌ಪಿ) ಸಂಜಯ್ ಪಾಂಡೆ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read