HomeIndiaBig News: ಪಕ್ಷ ಬಿಡಲು ಶಾಸಕರ ತಯಾರಿ: ಈ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರೇ ಇಲ್ಲ!

Big News: ಪಕ್ಷ ಬಿಡಲು ಶಾಸಕರ ತಯಾರಿ: ಈ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರೇ ಇಲ್ಲ!

ಪ್ರಮುಖವಾದ ರಾಷ್ಟ್ರೀಯ ಪಕ್ಷದ ಎಲ್ಲಾ ಶಾಸಕರು ಪಕ್ಷ ತೊರೆಯಲು ತಯಾರಿ ನಡೆಸಿದ್ದಾರೆ. ಆದ್ದರಿಂದ 243 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಪಕ್ಷಕ್ಕೆ ಇದೆಂಥ ಸ್ಥಿತಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಹೌದು ಇದು ಬಿಹಾರ ರಾಜ್ಯದ ಸ್ಥಿತಿ. 2025ರ ಅಂತ್ಯದಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 243 ಸದಸ್ಯ ಬಲದ ವಿಧಾನಸಭೆಯಲ್ಲಿ 6 ಸೀಟುಗಳನ್ನು ಗೆದ್ದಿತ್ತು. ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಪಕ್ಷಕ್ಕೆ ಈಗ ಮತ್ತೊಂದು ಶಾಕ್.

ಕಾಂಗ್ರೆಸ್‌ನ 6 ಶಾಸಕರು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಜೊತೆ ಸಂಪರ್ಕದಲ್ಲಿದ್ದಾರೆ. ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ಸರ್ಕಾರ ರಚನೆಯಾದ ಸುಮಾರು ಒಂದೂವರೆ ತಿಂಗಳ ಬಳಿಕ ಈ ಬೆಳವಣಿಗೆ ನಡೆಯುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲಾ ಕಾಂಗ್ರೆಸ್ ಶಾಸಕರು ಸಾಮೂಹಿಕವಾಗಿ ಪಕ್ಷ ಬಿಡಲು ತಯಾರಿ ನಡೆಸಿದ್ದಾರೆ. ಶಾಸಕರು ಜೆಡಿಯು ಸೇರಿದರೆ ಬಿಹಾರ ರಾಜ್ಯದಲ್ಲಿ ಕಾಂಗ್ರೆಸ್‌ನ ಯಾವುದೇ ಶಾಸಕರು ಇರುವುದಿಲ್ಲ. ಆಗ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ರಾಷ್ಟ್ರ ಮಟ್ಟದಲ್ಲಿ ಭಾರೀ ಮುಜುಗರ ಉಂಟಾಗಲಿದೆ.

ಏನಿದು ಬೆಳವಣಿಗೆ?: ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಬಿಹಾರ ರಾಜ್ಯದ 6 ಕಾಂಗ್ರೆಸ್ ಶಾಸಕರು ಜೆಡಿಯು ಸೇರಲಿದ್ದಾರೆ. ಈ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದು, ಸಂಪರ್ಕದಲ್ಲಿದ್ದಾರೆ.

ಒಂದು ವೇಳೆ ಸಾಮೂಹಿಕವಾಗಿ ಎಲ್ಲಾ ಶಾಸಕರು ಪಕ್ಷ ಬಿಟ್ಟರೆ ಬಿಹಾರ ಕಾಂಗ್ರೆಸ್ ಶಾಸಕರ ಮುಕ್ತ ರಾಜ್ಯವಾಗಲಿದೆ. ಬಿಹಾರ ಚುನಾವಣೆಯನ್ನು ಕಾಂಗ್ರೆಸ್ ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಂಡು ಎದುರಿಸಿತ್ತು. ಸುಮಾರು 61 ಸೀಟುಗಳಲ್ಲಿ ಕಣಕ್ಕಿಳಿದು 6 ಸೀಟುಗಳನ್ನು ಗೆಲ್ಲುವ ಮೂಲಕ ಮುಖಭಂಗ ಎದುರಿಸಿತ್ತು.

ಈಗ ಕಾಂಗ್ರೆಸ್ ಶಾಸಕರಾದ ಮನೋಹರ್ ಪ್ರಸಾದ್ ಸಿಂಗ್, ಸುರೇಂದ್ರ ಪ್ರಸಾದ್, ಅಭಿಷೇಕ್ ರಾಜನ್, ಅಭಿದುರ್ ರೆಹಮಾನ್, ಎಂಡಿ ಕಮ್‌ರೂಲ್ ಹೂಡಾ ಮತ್ತು ಮನೋಜ್ ಬಿಸ್ವಾನ್ ಜೆಡಿಯು ಜೊತೆ ಸಂಪರ್ಕದಲ್ಲಿದ್ದಾರೆ.

ಚುನಾವಣೆಯಲ್ಲಿ 89 ಸೀಟು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷವಾದ 85 ಸೀಟು ಗೆದ್ದ ಜೆಡಿಯುಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿತ್ತು. 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಮೂಲಕ ನಿತೀಶ್ ಕುಮಾರ್ ಇತಿಹಾಸ ನಿರ್ಮಾಣ ಮಾಡಿದ್ದರು.

ಗುರುವಾರ ಬಿಹಾರ ಕಾಂಗ್ರೆಸ್ ಸಂಕ್ರಾಂತಿ ಸಂದರ್ಭದಲ್ಲಿ ಪಕ್ಷದ ಮುಖ್ ಕಚೇರಿಯಲ್ಲಿ ಔತಣಕೂಟ ಆಯೋಜನೆ ಮಾಡಿತ್ತು. ಆದರೆ ಇದಕ್ಕೆ 6 ಶಾಸಕರು ಗೈರಾಗಿದ್ದು, ಅಚ್ಚರಿಗೆ ಕಾರಣವಾಗಿದೆ.

ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್, “ಎನ್‌ಡಿಎ ನಾಯಕರು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಯಾವುದೇ ಶಾಸಕರು ಪಕ್ಷ ಬಿಡುವುದಿಲ್ಲ” ಎಂದು  ಹೇಳಿದ್ದಾರೆ.

ಆದರೆ ಎಲ್‌ಜೆಪಿ ಪಕ್ಷದ ಶಾಸಕ, ಸಚಿವ ಸಂಜಯ್ ಸಿಂಗ್, ‘ಸಂಕ್ರಾಂತಿ ಬಳಿಕ ಕ್ರಾಂತಿ ಆಗಲಿದೆ. ಸಾಮೂಹಿಕವಾಗಿ ಎಲ್ಲಾ ಶಾಸಕರು ಎನ್‌ಡಿಎ ಮೈತ್ರಿಕೂಟಕ್ಕೆ ಆಗಮಿಸಲಿದ್ದಾರೆ” ಎಂದು ಹೇಳಿದ್ದಾರೆ.

ನವೆಂಬರ್ 2025ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 89, ಜೆಡಿಯು 85, ಆರ್‌ಜೆಡಿ 25, ಎಲ್‌ಜೆಪಿಆರ್‌ವಿ 19, ಕಾಂಗ್ರೆಸ್ 6, ಎಐಎಂಐಎಂ 5, ಹೆಚ್‌ಎಎಂಎಸ್ 5 ಮತ್ತು ಇತರರು 5 ಸೀಟುಗಳಲ್ಲಿ ಗೆಲುವು ಸಾಧಿಸಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular