HomeIndiaBIGG UPDATE :ಹೈದರಾಬಾದ್ ನಲ್ಲಿ ಭೀಕರ ಅಗ್ನಿ ದುರಂತ : 7 ಕಾರ್ಮಿಕರು ಸಜೀವ ದಹನ

BIGG UPDATE :ಹೈದರಾಬಾದ್ ನಲ್ಲಿ ಭೀಕರ ಅಗ್ನಿ ದುರಂತ : 7 ಕಾರ್ಮಿಕರು ಸಜೀವ ದಹನ

ಹೈದರಾಬಾದ್: ತೆಲಂಗಾಣದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ನಾಂಪಲ್ಲಿಯ ಬಜಾರ್ಘಾಟ್ನ ರಾಸಾಯನಿಕ ಗೋದಾಮಿನ ನಾಲ್ಕು ಮಹಡಿಗಳಿಗೆ ಬೆಂಕಿ ಹರಡಿ. ಬೆಂಕಿಯಲ್ಲಿ 7  ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ನಡೆದಿದೆ.

ನಾಂಪಲ್ಲಿಯ  ಬಜಾರ್ ಘಾಟ್ ನ ರಾಸಾಯನಿಕ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, 7 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಗೋದಾಮಿಯಲ್ಲಿ ಇನ್ನೂ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೂ  ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ಪಕ್ಕದ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವ ಜನರು ಬೆಂಕಿಯನ್ನು ನೋಡಿದ ನಂತರ ಭಯಭೀತರಾಗಿದ್ದಾರೆ. ಘಟನೆಯ ಸಂಪೂರ್ಣ ವಿವರಗಳು ಇನ್ನೂ ತಿಳಿದುಬಂದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular