HomeIndiaBIGG NEWS : ಮನೋರಂಜನ್ ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ಆತ 'ಕ್ರಾಂತಿಕಾರಿ' :...

BIGG NEWS : ಮನೋರಂಜನ್ ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ಆತ ‘ಕ್ರಾಂತಿಕಾರಿ’ : ಪೊಲೀಸ್ ಮೂಲಗಳು

ಮೈಸೂರು : ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಕೊಠಡಿಗೆ ಜಿಗಿದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಾದ ಮನೋರಂಜನ್ ಡಿ ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ಎಂಬ ಸೋಶಿಯಲ್ ಮೀಡಿಯಾ ಪೇಜ್ ನೊಂದಿಗೆ ಸಂಬಂಧ ಹೊಂದಿದ್ದ ಮತ್ತು ಆತ “ಕ್ರಾಂತಿಕಾರಿ ರೀತಿ” ಎಂದು ತೋರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

33 ವರ್ಷದ ಮೈಸೂರು ನಿವಾಸಿ, ಲಕ್ನೋದ ಸಾಗರ್ ಶರ್ಮಾ ಅವರೊಂದಿಗೆ ಘೋಷಣೆಗಳನ್ನು ಕೂಗಿದ್ದರು ಮತ್ತು ಡಬ್ಬಿಗಳಿಂದ ಹಳದಿ ಹೊಗೆಯನ್ನು ರಿಲೀಸ್ ಮಾಡಿದ್ದರು. ಇದು ಸದನದಲ್ಲಿ ಭೀತಿ ಮತ್ತು ಗೊಂದಲಕ್ಕೆ ಕಾರಣವಾಯಿತು.

ಸಂಸತ್ತಿನ ಭದ್ರತಾ ಉಲ್ಲಂಘನೆ ನಂತರ ಮೈಸೂರು ಪೊಲೀಸರು ಕ್ರಮ ಕೈಗೊಂಡು ಆತನ ಹಿನ್ನೆಲೆಯನ್ನು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಿದರು.ಅವರು ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ನೊಂದಿಗೆ ಸಂಬಂಧ ಹೊಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ. “ನಾವು ಆತನ ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಕಂಡಿಲ್ಲ. ಅವರು ತುಂಬಾ ಶಾಂತ ವ್ಯಕ್ತಿಯಾಗಿದ್ದರು ಆದರೆ ಅವರು ಓದಿದ ಪುಸ್ತಕಗಳನ್ನು ನೋಡಿದಾಗ, ಅವರು ‘ಕ್ರಾಂತಿಕಾರಿ; ಎಂದು ತೋರುತ್ತದೆ” ಎಂದು ಎಸಿಪಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular