HomeKarnatakaBIGG NEWS : ಮಂಗಳೂರು `ಕುಕ್ಕರ್ ಬಾಂಬ್’ ಬ್ಲ್ಯಾಸ್ಟ್ ಕೇಸ್ : ಮತ್ತೊಂದು ಸ್ಪೋಟಕ ಮಾಹಿತಿ...

BIGG NEWS : ಮಂಗಳೂರು `ಕುಕ್ಕರ್ ಬಾಂಬ್’ ಬ್ಲ್ಯಾಸ್ಟ್ ಕೇಸ್ : ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗ!

ಬೆಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಕುಕ್ಕರ್ ಬಾಂಬ್ ಸ್ಪೋಟದ ಮಾಸ್ಟರ್ ಮೈಂಡ್ ಬೆಳಗಾವಿ ಉಗ್ರ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಉಗ್ರ ಶಾರೀಕ್ ಗೆ ಬೆಳಗಾವಿ ಉಗ್ರ ಅಪ್ಸರ್ ಪಾಷಾ ತರಬೇತಿ ನೀಡಿದ್ದ ಎಂದು ಮಹಾರಾಷ್ಟ್ರ ಪೊಲೀಸರು ಹಾಗೂ ಎನ್ ಐಎ ಅಧಿಕಾರಿಗಳು ನಡೆಸಿರುವ ತನಿಖೆಯಲ್ಲಿ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಗಾವಿ ಉಗ್ರ ಅಪ್ಸರ್ ಪಾಷಾ ಲಷ್ಕರ್ ತೊಯ್ಬ ಉಗ್ರ ಸಂಘಟನೆಯ ಜೊತೆಗೆ ಸಂಪರ್ಕದಲ್ಲಿದ್ದ. ಬಾಂಬರ್ ಶಾರೀಕ್ ಗೆ ತರಬೇತಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಅಪ್ಸರ್ ಪಾಷಾ ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಅಪ್ಸರ್ ಪಾಷಾ ಬಾಂಗ್ಲಾದೇಶದಲ್ಲಿ ಬಾಂಬ್ ತಯಾರಿಕೆ ಬಗ್ಗೆ ತರಬೇತಿ ಪಡೆದಿದ್ದು, ಬಳಿಕ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಅರೋಪಿ ಶಾರೀಕ್ ಗೆ ತರಬೇತಿ ನೀಡಿದ್ದ. ಈ ಹಿಂದೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಅಪ್ಸರ್ ಬಳಿಕ ಉಗ್ರ ಚಟುವಟಿಕೆ ಬಗ್ಗೆ ತರಬೇತಿ ನೀಡುತ್ತಿದ್ದ ಎನ್ನಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular