ಮಂಡ್ಯ: ಊರಿಗೆ ಬಂದರೂ ಮನೆಗೆ ಬಾರದೆ ‘ಬಿಗ್ ಬಾಸ್’ ವಿನ್ನರ್ ಗಿಲ್ಲಿ ನಟ ವಾಪಸ್ ತೆರಳಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸ್ವಗ್ರಾಮ ದಡದಪುರದ ಮನೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ ಹಿನ್ನೆಲೆಯಲ್ಲಿ ವಾಪಸ್ ತೆರಳಿದ್ದಾರೆ.
ದಡದಪುರದ ಬಸವೇಶ್ವರ ದೇವಾಲಯದವರೆಗೆ ಗಿಲ್ಲಿ ನಟನ ಮೆರವಣಿಗೆ ನಡೆಸಲಾಗಿದೆ. ಮಳವಳ್ಳಿಯ ದಂಡಿನ ಮಾರಮ್ಮನ ದೇವಸ್ಥಾನದಿಂದ ಮೆರವಣಿಗೆ ನಡೆಸಲಾಗಿತ್ತು.
ದಡದಪುರದ ಬಸವೇಶ್ವರ ದೇವಾಲಯದವರೆಗೆ ಮೆರವಣಿಗೆಯಲ್ಲಿ ಗಿಲ್ಲಿ ನಟ ಬಂದಿದ್ದರು. ದೇವಾಲಯದವರೆಗೆ ಮೆರವಣಿಗೆಯಲ್ಲಿ ಬಂದು ನಂತರ ವಾಪಸ್ ತೆರಳಿದ್ದಾರೆ. ಮನೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಬೆಂಗಳೂರಿಗೆ ವಾಪಸ್ ತೆರಳಿದ್ದಾರೆ.

