ಬೆಂಗಳೂರು : ಬೆಂಗಳೂರಿನ ಲಾಡ್ಜ್ ನಲ್ಲಿ ಯುವಕ- ಯುವತಿ ಸಾವು ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯಲಹಂಕ ನ್ಯೂಟೌನ್ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಬಿಲ್ಡಿಂಗ್ ನಲ್ಲಿದ್ದ ಲಾಡ್ಜ್ ನಲ್ಲಿ ಘಟನೆ ನಡೆದಿದೆ.ಮೃತ ಯುವತಿ ಕಾವೇರಿ ಬಡಿಗೇರ್ ಹುನಗುಂದ ಮೂಲದವರು. ಯುವಕ ರಮೇಶ್ ಗದಗ ಮೂಲದವನು ಎಂದು ಗುರುತಿಸಲಾಗಿದೆ.
ಮೃತ ಕಾವೇರಿಗೆ ಮದುವೆಯಾಗಿ ಮೂವರು ಮಕ್ಕಳಿದ್ದರು, ರಮೇಶ್ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ ಕಾವೇರಿ ಇದೀಗ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ.
ಮದುವೆ ವಿಚಾರಕ್ಕೆ ಕಾವೇರಿಗೆ ಒತ್ತಡ ಹಾಕಲು ಹೋಗಿದ್ದ ರಮೇಶ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದನು. ಇದರಿಂದ ಭಯಗೊಂಡ ಕಾವೇರಿ ವಾಶ್ ರೂಂ ಬಾಗಿಲು ಹಾಕಿಕೊಂಡು ಸಂಬಂಧಿಕರಿಗೆ ಕರೆ ಮಾಡಿದ್ದಾಳೆ. ನಂತರ ರಮೇಶ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ. ಆದರೆ ಮಹಿಳೆ ಕಾವೇರಿ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾಳೆ.